ಕೊಪ್ಪಳದಲ್ಲಿ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಪ್ರಾರಂಭ.

ಕೊಪ್ಪಲ ಸೆ. ೩೦ (ಕ ವಾ) ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರವನ್ನು ಪ್ರಭಾರಿ ಜಿಲ್ಲಾಧಿಕಾರಿ ಡಾ|| ಪ್ರವೀಣಕುಮಾರ ಜಿ.ಎಲ್. ಅವರು ಬುಧವಾರದಂದು ಉದ್ಘಾಟಿಸಿದರು.
      ಗ್ರಾಹಕರ ಮಾಹಿತಿ ಕೇಂದ್ರದ ಉದ್ಘಾಟನೆಯ ನಂತರ ಈ ಕುರಿತು ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಅವರು, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಆಯ್ಕೆಯಾಗಿರುವ ಕರುಣಾ ರೂರಲ್ ಡೆವ್ಹಲೆಪ್‌ಮೆಂಟ್ ಸೊಸೈಟಿ
   ಕರುಣಾ ರೂರಲ್ ಡೆವ್ಹಲೆಪ್‌ಮೆಂಟ್ ಸೊಸೈಟಿಯ iಹಾಲಕ್ಷ್ಮೀ ಕೇಸರಹಟ್ಟಿ  ಹಾಗೂ ಇತರೆ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
      ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಮಾಹಿತಿ ಕೇಂದ್ರದ ದೂರವಾಣಿ ಸಂಖ್ಯೆ ೦೮೫೩೯-೨೨೫೦೦೧ ಕ್ಕೆ ಸಂಪರ್ಕಿಸಿ ಯೋಜನೆಯ ಪ್ರಯೋಜನೆಯನ್ನು ಸಂಘದ ಮೂಲಕ ಪಡೆದುಕೊಳ್ಳಬಹುದಾಗಿದೆ.

ಇವರಿಗೆ ಗ್ರಾಹಕರ ಮಾಹಿತಿ ಕೇಂದ್ರವನ್ನು ನಿರ್ವಹಿಸುವ ಹೊಣೆಗಾರಿಕೆ ವಹಿಸಲಾಗಿದೆ.   ಗ್ರಾಹಕರ ರಕ್ಷಣೆ ಕಾಯ್ದೆ ಅಡಿಯಲ್ಲಿ ಗ್ರಾಹಕರಿಗೆ ನೀಡಲಾದ ಹಕ್ಕು ಮತ್ತು ಕತ್ಯವ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಗ್ರಾಹಕರು ಖರೀದಿಸುವ ವಸ್ತುಗಳಲ್ಲಿ ಪಡೆಯುವ ಸೇವೆಗಳು ದೋಷ ಪೂರಿತವಾಗಿದ್ದಲ್ಲಿ ಅಥವಾ ನೂನ್ಯತೆ ಇದ್ದಲ್ಲಿ, ನೊಂದ ಗ್ರಾಹಕರು ಅದನ್ನು ಪರಿಹರಿಸಿಕೊಳ್ಳುವ ಬಗ್ಗೆ ಮಾಹಿತಿ ಕೇಂದ್ರದ ಪ್ರಯೋಜನೆ ಪಡೆಯಬಹುದು ಎಂದು ತಿಳಿಸಿದರು. 

Please follow and like us:
error