ಭಾಗ್ಯನಗರ ಪಟ್ಟಣ ಪಂಚಾಯತಿ ವಾರ್ಡ್ ರಚನೆ.

ಕೊಪ್ಪಳ ಮಾ. ೧೦ (ಕ ವಾ) ಕೊಪ್ಪಳ ತಾಲೂಕು ಭಾಗ್ಯನಗರ ಪಟ್ಟಣ ಪಂಚಾಯತಿಯ ವಾರ್ಡ್ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಇದು, ಧಾರವಾಡ ಹೈಕೋರ್ಟ್ ಪೀಠ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ ಅವರು ತಿಳಿಸಿದ್ದಾರೆ.    
     ಭಾಗ್ಯನಗರ ಪಟ್ಟಣ ಪಂಚಾಯತಿಗಳ ವಾರ್ಡ್ ರಚನೆಗೆ ಸಂಬಂಧಿಸಿದಂತೆ ರಾಜ್ಯ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ನೀಡಿರುವ ನಿರ್ದೇಶನದಂತೆ ಭಾಗ್ಯನಗರ ಪಟ್ಟಣ ಪಂಚಾಯತಿಯ ವಾರ್ಡ್ ಪುನರ್ ವಿಂಗಡಣೆ ಮಾಡಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಧಾರವಾಡ ಹೈಕೋರ್ಟ್ ನ್ಯಾಯಪೀಠದಲ್ಲಿರುವ ರಿಟ್ ಪಿಟಿಷನ್ ಸಂ: ೧೧೨೬೧೧/೨೦೧೫ ರಲ್ಲಿ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು, ಈ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
     ಭಾಗ್ಯನಗರ ಪಟ್ಟಣ ಪಂಚಾಯತಿಯ ಒಟ್ಟು ೧೯ ವಾರ್ಡ್‌ಗಳ ಪುನರ್ ವಿಂಗಡಣೆ ವಿವರ ಇಂತಿದೆ.  ವಾರ್ಡ್ ನಂ.೦೧- ಚಿತ್ರಗಾರ ಓಣಿ ಹಾಗೂ ಹರಿಜನ ಕಾಲೋನಿ.  ವಾರ್ಡ್ ನಂ. ೨- ಜನತಾ ಕಾಲೋನಿ ಹಾಗೂ ಕೀರ್ತಿ ಕಾಲೋನಿ.  ವಾರ್ಡ್ ನಂ. ೩- ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರದೇಶ ಹಾಗೂ ಮುಖ್ಯ ರಸ್ತೆ.  ವಾರ್ಡ್ ನಂ. ೪- ಶಾಸ್ತ್ರಿ ಕಾಲೋನಿ.  ವಾರ್ಡ್ ನಂ. ೫- ಎಂ.ಹೆಚ್.ಪಿ.ಎಸ್. ಶಾಲೆ ಪ್ರದೇಶ ಹಾಗೂ ಬಜಾರ ರಸ್ತೆ.  ವಾರ್ಡ್ ನಂ. ೬- ಊರಮ್ಮನ ಗುಡಿ ಹಾಗೂ ಶಂಕರಾಚಾರ್ಯ ಮಠದ ಪ್ರದೇಶ.  ವಾರ್ಡ್ ನಂ. ೦೭- ಶ್ರೀರಾಮ ಕಾಲೋನಿ ಹಾಗೂ ಶಂಕರಾಚಾರ್ಯ ಮಠದ ದಕ್ಷಿಣ ಭಾಗ.  ವಾರ್ಡ್ ನಂ. ೮- ಕೆ.ಹೆಚ್.ಡಿ.ಸಿ. ಕಾಲೋನಿ.  ವಾರ್ಡ್ ನಂ. ೯- ಸ್ಮಶಾನ ರಸ್ತೆ.  ವಾರ್ಡ್ ನಂ. ೧೦- ನವನಗರ ರಸ್ತೆ, ಕರ್ನಾಟಕ ಗೃಹ ಮಂಡಳಿ ಹಾಗೂ ನವನಗರ.  ವಾರ್ಡ್ ನಂ. ೧೧- ವಾಲ್ಮೀಕಿ ಸರ್ಕಲ್ ಪ್ರದೇಶ.  ವಾರ್ಡ್ ನಂ. ೧೨- ಕಿನ್ನಾಳ ಮುಖ್ಯ ರಸ್ತೆ ಹಾಗೂ ಕದಂಬ ನಗರ.  ವಾರ್ಡ್ ನಂ. ೧೩- ಹಿರೇ ಮಸೂತಿ ಪ್ರದೇಶ.  ವಾರ್ಡ್ ನಂ. ೧೪- ಮೋಚಿ ಓಣಿ.  ವಾರ್ಡ್ ನಂ. ೧೫- ಹಮಾಲರ ಸಂಘ ಹಾಗೂ ಮೋಚಿ ಓಣಿ.  ವಾರ್ಡ್ ನಂ. ೧೬- ಕೀರ್ತಿ ಕಾಲೋನಿ, ಪದ್ಮಾವತಿ ಕಾಲೋನಿ ಹಾಗೂ ಧನ್ವಂತರಿ ಕಾಲೋನಿ.  ವಾರ್ಡ್ ನಂ. ೧೭- ಧನ್ವಂತರಿ ಕಾಲೋನಿ ಗಣೇಶ ತಗ್ಗು.  ವಾರ್ಡ್ ನಂ. ೧೮- ಗಣೇಶ ತೆಗ್ಗು, ಪ್ರಗತಿ ನಗರ, ಪೊಲೀಸ್ ಕಾಲೋನಿ, ಕಿನ್ನಾಳ-ಕುಷ್ಟಗಿ ರಸ್ತೆ.  ವಾರ್ಡ್ ನಂ. ೧೯- ಟೀಚರ್‍ಸ್ ಕಾಲೋನಿ, ದುರಗಮುರಗಿ ಕಾಲೋನಿ, ಎನ್‌ಜಿಓ ಕಾಲೋನಿ, ಅಂಬೇಡ್ಕರ್ ಕಾಲೋನಿ, ಬೇಂದ್ರೆ ನಗರ.  ವಾರ್ಡ್‌ಗಳ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ಪ್ರತಿ ವಾರ್ಡ್ ವಾರು ಚೆಕ್‌ಬಂದಿ ವಿವರಗಳನ್ನು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
     ವಾರ್ಡ್‌ಗಳ ಪುನರ್ ವಿಂಗಡಣೆಯ ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಕೊಪ್ಪಳ ತಹಸಿಲ್ದಾರರ ಕಚೇರಿ ಹಾಗೂ ಭಾಗ್ಯನಗರದ ಪಟ್ಟಣ ಪಂಚಾಯತಿ ಕಚೇರಿಯ ನೋಟಿಸ್ ಫಲಕದಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ ತಿಳಿಸಿದ್ದಾರೆ.
Please follow and like us:
error