ಲಯನ್ಸ್ ಕ್ಲಬ್ ವತಿಯಿಂದ ಆರು ದಿನಗಳ ಅಕ್ಯೂಪ್ರೆಶರ್ ಚಿಕಿತ್ಸೆ.

ಕೊಪ್ಪಳ- ೦೮ ಲಯನ್ಸ್ ಕ್ಲಬ್ ಕೊಪ್ಪಳದ ವತಿಯಿಂದ ದಿನಾಂಕ ೦೯-೦೯-೨೦೧೫ ರಿಂದ ೧೪-೦೯-೨೦೧೫ ರ ವರೆಗೆ ಆರು ದಿನಗಳ ಕಾಲ ಅಕ್ಯೂಪ್ರೆಶರ್ ಚಿಕಿತ್ಸಾ ಶಿಬಿರವನ್ನು ಮುಂಜಾನೆ ೯ ರಿಂದ ಸಂಜೆ ೬ ಗಂಟೆಯವರೆಗೆ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜೈಪುರದ ನುರಿತ ತಜ್ಞರಾದ ಡಾ. ಎಂ.ಎ. ಚಾಯ್ನನ್, ಡಾ. ಆರ್.ಪಿ. ಭಾತಿ ಮತ್ತು ಡಾ. ಎಲ್.ಆರ್. ಜಾಖರ್ ಅವರಿಂದ ಈ ಅಕ್ಯೂಪ್ರೆಶರ್ ಚಿಕಿತ್ಸಾ ಪದ್ಧತಿಯ ಪ್ರಕೃತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ದೇಹದ ಅಂಗೈ ಮತ್ತು ಅಂಗಾಲುಗಳಲ್ಲಿರುವ ಅಕ್ಯೂಪ್ರೆಶರ್ ಬಿಂದುಗಳನ್ನು ಒತ್ತುವುದರಿಂದ ರಕ್ತ ಪರಿಚಲನೆ ಸರಿಯಾಗಿ, ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ. ದೇಹದ ಅತಿ ಭಾರ, ಡಯಾಬಿಟಿಸ್, ಅರ್ಧ ತಲೆ ನೋವು, ಕೀಲು ನೋವು, ಬಿ.ಪಿ., ಬೆನ್ನು ಹುರಿ ನೋವು, ಹಾಸಿಗೆಯಲ್ಲಿ ಮೂತ್ರ ಮಾಡುವಿಕೆ, ಮೊಣಕಾಲು ನೋವು, ಪಿತ್ತ ವಾತ, ಅಪಚನ, ಮಲಬದ್ಧತೆ ಮೊದಲಾದ ಸಮಸ್ಯೆಗಳಿದ್ದವರು ಈ ಚಿಕಿತ್ಸೆಯ ಮೂಲಕ ನಿವಾರಣೆ ಮಾಡಿಸಿಕೊಳ್ಳಬಹುದಾಗಿದೆ. ೬ ದಿನಗಳಲ್ಲಿ ಕೇವಲ ೩೦೦ ಜನರಿಗೆ ಈ ಚಿಕಿತ್ಸೆ ಕೊಡಲಾಗುವುದು. ಒಬ್ಬರಿಗೆ ೧೫-೨೦ ನಿಮಿಷಗಳವರೆಗೆ ಚಿಕಿತ್ಸೆ ನೀಡಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ರೂ. ೧೦೦-೦೦ ಗಳನ್ನು ಕೊಟ್ಟು ಹೆಸರು ನೋಂದಾಯಿಸ ಬಹುದು. ಒಂದು ಸಲ ಮಾತ್ರ ಹೆಸರು ನೋಂದಾಯಿಸಿದರೆ ೬ ದಿನಗಳ ಕಾಲ ಚಿಕಿತ್ಸೆ ಪಡೆಯಬಹುದು. ಹೆಸರನ್ನು ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ನೋಂದಾಯಿಸಿ ಚಿಕಿತ್ಸೆಯ ಲಾಭ ಪಡೆಯಬೇಕೆಂದು ಲಯನ್ಸ್ ಕ್ಲಬ್ ಕೊಪ್ಪಳದ ಅಧ್ಯಕ್ಷ ಲಯನ್ ಶ್ರೀನಿವಾಸ ಗುಪ್ತಾ, ಕಾರ್ಯದರ್ಶಿ ಲಯನ್ ಪರಮೇಶಪ್ಪ ಕೊಪ್ಪಳ, ಖಜಾಂಚಿ ಲಯನ್ ಅರವಿಂದ ಅಗಡಿ ತಿಳಿಸಿದ್ದಾರೆ.
Please follow and like us:
error