ಜಿಲ್ಲೆಯಲ್ಲಿ ಉತ್ತಮ ಮಳೆ : ಶೇ. ೯೨ ರಷ್ಟು ಬಿತ್ತನೆ

ಕೊಪ್ಪಳ ಆ. : ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಉತ್ತಮ ಮಳೆಯಾಗುತ್ತಿದೆ. ಆಗಸ್ಟ್ ತಿಂಗಳ ಆರಂಭದಲ್ಲಿ ಉಂಟಾದ ಪರಿಸ್ಥಿತಿಯಿಂದ ಆತಂಕಗೊಂಡಿದ್ದ ರೈತರು ಈಗ ಉತ್ತಮ ಮಳೆಯಾಗುತ್ತಿರುವುದರಿಂದ ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈಗಾಗಲೆ ಜಿಲ್ಲೆಯಲ್ಲಿ ಶೇ. ೯೨ ರಷ್ಟು ಬಿತ್ತನೆಯಾಗಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು ೨೫೨೫೦೦ ಹೆಕ್ಟೇರ್ ಸಾಗುವಳಿ ಕ್ಷೇತ್ರವಿದ್ದು, ಆ ಪೈಕಿ ೧೮೧೪೫೦ ಹೆ. ಖುಷ್ಕಿ, ೩೮೮೫೦ ಹೆ., ೩೮೮೫೦ ಹೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಹಾಗೂ ೩೨೨೦೦ ಹೆ. ಇತರೆ ಸಾಗುವಳಿ ಕ್ಷೇತ್ರವಿದೆ. ಆಗಸ್ಟ್ ತಿಂಗಳಲ್ಲಿ ಈ ಬಾರಿ ವಾಡಿಕೆ ೮೭. ೩ ಮಿ.ಮೀ. ಗೆ ಬದಲಾಗಿ ೧೦೧. ೧ ಮಿ.ಮೀ. ಉತ್ತಮ ಮಳೆಚಿiiಗಿದೆ. ಜಿಲ್ಲೆಯ ೨೫೨೫೦೦ ಹೆಕ್ಟೇರ್ ಬಿತ್ತನೆ ಪ್ರದೇಶದ ಪೈಕಿ ೨೩೩೦೨೬ ಹೆ. ನಲ್ಲಿ ಬಿತ್ತನೆಯಾಗಿದ್ದು ಶೇ. ೯೨ ರಷ್ಟು ಬಿತ್ತನೆಯಾದಂತಾಗಿದೆ.
ಮಳೆ : ಜಿಲ್ಲೆಯಲ್ಲಿ ಈ ವರ್ಷದಲ್ಲಿ ಒಟ್ಟಾರೆಯಾಗಿ ೩೩೪.೧ ಮಿ.ಮೀ. ಮಳೆಯಾಗಿದೆ. ಇದೇ ವರ್ಷದ ಮೇ, ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕ್ರಮವಾಗಿ ೫೧. ೨, ೪೭. ೪ ಮತ್ತು ೯೪ ಮಿ.ಮೀ. ಸರಾಸರಿ ಮಳೆ ಬಿದ್ದಿದೆ. ಈ ವರ್ಷ ಕೊಪ್ಪಳ ತಾಲೂಕಿನಲ್ಲಿ ೪೧೦. ೭ ಮಿ.ಮೀ., ಕುಷ್ಟಗಿ- ೨೭೧. ೯ , ಯಲಬುರ್ಗಾ- ೩೬೮. ೪ ಹಾಗೂ ಗಂಗಾವತಿ ತಾಲೂಕಿನಲ್ಲಿ ೨೮೫. ೫ ಮಿ.ಮೀ. ಮಳೆಯಾಗಿದೆ.
ಬಿತ್ತನೆ : ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಬಿದ್ದ ಮಳೆಯಿಂದ ಉತ್ತೇಜಿತರಾದ ರೈತರು ಕೃಷಿ ಚಟುವಟಿಕೆಯನ್ನು ಉತ್ತಮ ಬೆಳೆ ನಿರೀಕ್ಷೆಯಲ್ಲಿ ಪ್ರಾರಂಭಿಸಿದ್ದರು, ಆದರೆ ಆಗಸ್ಟ್ ತಿಂಗಳ ಆರಂಭದಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆ ಸುರಿದ ಕಾರಣ ರೈತರು ಆತಂಕಗೊಂಡಿದ್ದರು. ಆದರೆ ಇದೀಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರಲ್ಲಿ ಹೊಸ ಹುರುಪು ಮೂಡಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು ೨೫೨೫೦೦ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ ೨೩೩೦೨೬ ಹೆ. ನಲ್ಲಿ ಬಿತ್ತನೆಯಾಗಿದೆ. ಇದರಿಂದಾಗಿ ಒಟ್ಟು ಶೇ. ೯೨ ರಷ್ಟು ಬಿತ್ತನೆಯಾದಂತಾಗಿದೆ. ಕೊಪ್ಪಳ ತಾಲೂಕಿನಲ್ಲಿ ೬೬೨೦೦ ಹೆ. ಗುರಿಯ ಬದಲಿಗೆ ೫೯೨೭೫ ಹೆ. (ಶೇ. ೯೦), ಕುಷ್ಟಗಿ- ೬೮೩೫೦ ಹೆ. ಗುರಿಯ ಎದುರು ೬೬೮೮೯ ಹೆ. (ಶೇ. ೯೮), ಯಲಬುರ್ಗಾ- ೫೫೦೨೦ ಹೆ. ಗುರಿಯ ಬದಲಿಗೆ ೫೪೯೯೪ ಹೆ.(ಶೇ. ೯೯), ಹಾಗೂ ಗಂಗಾವತಿ ತಾಲೂಕಿನಲ್ಲಿ ೬೪೦೩೦ ಹೆ. ಗುರಿಯ ಬದಲಿಗೆ ೫೧೮೬೮ ಹೆ. (ಶೇ. ೮೦) ನಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆಗಸ್ಟ್ ತಿಂಗಳಾಚಿತ್ಯದ ವೇಳೆಗೆ ಬಿತ್ತನೆ ಪ್ರಮಾಣ ಶೇ. ೧೦೦ ರಷ್ಟಾಗುವ ಸಾಧ್ಯತೆ ಇದೆ.
ಏಕದಳ ಬೆಳೆಗಳಾದ ಭತ್ತ, ಜೋಳ, ಮೆಕ್ಕೆಜೋಳ, ಸಜ್ಜೆ, ನವಣೆ ಬೆಳೆಗಳ ಬಿತ್ತನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ೧೩೯೬೦೦ ಹೆಕ್ಟೇರ್ ಗುರಿಯ ಬದಲಿಗೆ ೧೪೬೮೧೬ ಹೆ. ಬಿತ್ತನೆಯಾಗಿದೆ. ಆ ಪೈಕಿ ಕೊಪ್ಪಳ ತಾಲೂಕಿನಲ್ಲಿ ೩೯೯೭೪ ಹೆ., ಕುಷ್ಟಗಿ- ೪೦೫೩೮ ಹೆ., ಯಲಬುರ್ಗಾ- ೨೩೩೩೬ ಹೆ., ಹಾಗೂ ಗಂಗಾವತಿ- ೪೨೯೬೮ ಹೆ., ಬಿತ್ತನೆಯಾಗಿದೆ. ತೊಗರಿ, ಹುರಳಿ, ಹೆಸರು, ಅಲಸಂದಿ, ಮಡಿಕೆ ಮುಂತಾದ ದ್ವಿದಳ ಬೆಳೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ೩೮೨೦೦ ಹೆ. ಬಿತ್ತನೆಯ ಗುರಿ ಹೊಂದಿದ್ದು, ೩೩೬೧೧ ಹೆ. ಬಿತ್ತನೆಯಾಗಿದೆ. ಆ ಪೈಕಿ ಕೊಪ್ಪಳ ತಾಲೂಕಿಲ್ಲಿ ೫೦೮೦ ಹೆ., ಕುಷ್ಟಗಿ- ೧೨೯೧೨ ಹೆ., ಯಲಬುರ್ಗಾ- ೧೧೭೭೭ ಹೆ., ಹಾಗೂ ಗಂಗಾವತಿ ತಾಲೂಕಿನಲ್ಲಿ ೩೮೪೨ ಹೆ. ಬಿತ್ತನೆಯಾಗಿದೆ. ಎಣ್ಣೆಕಾಳು ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಎಳ್ಳು, ಗುರೆಳ್ಳು ಮುಂತಾದ ಬೆಳೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ೭೨೦೦೦ ಹೆ. ಬಿತ್ತನೆ ಗುರಿಯ ಬದಲಿಗೆ ೪೫೭೦೨ ಹೆ. ಬಿತ್ತನೆಯಾಗಿದೆ. ಆ ಪೈಕಿ ಕೊಪ್ಪಳ ತಾಲೂಕಿನಲ್ಲಿ ೧೦೬೧೪ ಹೆ., ಕುಷ್ಟಗಿ- ೧೨೪೮೮ ಹೆ., ಯಲಬುರ್ಗಾ- ೧೮೫೩೫ ಹೆ., ಹಾಗೂ ಗಂಗಾವತಿ ತಾಲೂಕಿಲ್ಲಿ ೪೦೬೫ ಹೆ., ಬಿತ್ತನೆಯಾಗಿದೆ. ಅದೇ ರೀತಿ ಹತ್ತಿ, ಕಬ್ಬು ವಾಣಿಜ್ಯ ಬೆಳೆಗೆ ಸಂಬಂಧಿಸಿದಂತೆ ಒಟ್ಟು ೨೭೦೦ ಹೆ. ಗುರಿಯ ಬದಲಿಗೆ ೬೮೯೭ ಹೆ. ಬಿತ್ತನೆಯಾಗಿದ್ದು, ಆ ಪೈಕಿ ಕೊಪ್ಪಳ- ೩೬೦೭ ಹೆ., ಕುಷ್ಟಗಿ- ೯೫೧ ಹೆ., ಯಲಬುರ್ಗಾ- ೧೩೪೬ ಹೆ., ಹಾಗೂ ಗಂಗಾವತಿ ತಾಲೂಕಿನಲ್ಲಿ ೯೯೩ ಹೆ. ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
Please follow and like us:
error

Related posts

Leave a Comment