ಗಾಡ್‌ಫಾದರ್ ಚಿತ್ರ ವಿಮರ್ಶೆ


    ಮೂರು ಪಾತ್ರ, ನಾಲ್ಕು ಆಯಾಮ ಮತ್ತು ಒಂದೇ ಮಾತು “ಸೂಪರ್”

    ದಿನೇಶಬಾಬು ನಿರ್ದೇಶನದ ಹಾಲಿವುಡ್ ಚಿತ್ರದ ನಂತರ ಉಪೇಂದ್ರ ಮೂರು ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಚಿತ್ರ ಗಾಡ್‌ಫಾದರ್. ಚಿತ್ರದಲ್ಲಿ ಉಪೇಂದ್ರ ಮೂರು ಪಾತ್ರಗಳಲ್ಲಿ ಕಾಣಿಸಿಕೊಂಡರೂ ನಾಲ್ಕು ಆಯಾಮಗಳಿವೆ. ಇಡೀ ಚಿತ್ರದ ಬಗ್ಗೆ ಸಿನಿಮಾ ನೋಡಿದೋರು ಹೇಳೋ ಒಂದೇ ಮಾತು “ಸೂಪರ್” ಗಾಡ್‌ಫಾದರ್.
       ಚಿತ್ರದಲ್ಲಿ ಅಜೇಯ್ ಪಾತ್ರ ಬರುವವರೆಗೆ ನೀರಸವಾಗಿ ಸಾಗುವ ಕಥೆ, ಬಳಿಕ ವೇಗ ಪಡೆದುಕೊಳ್ಳುತ್ತದೆ. ಆಪ್ಪನ ಮೇಲೆ ಸೇಡು ತೀರಿಸಿಕೊಳ್ಳುವ ಟಿಪಿಕಲ್ ಕ್ಯಾರೆಕ್ಟರ್, ತನ್ನದಲ್ಲದ ತಪ್ಪಿಗೆ ಪರಿತಪಿಸುವ ಪಾತ್ರದಲ್ಲಿ ಹಾಗೂ ಕಾಲಿದ್ದು, ನಡೆದಾಡದ ನಾಟ್ಯಮಯೂರ ಅಲಿಯಾಸ್ ಶಿವಕುಮಾರ ಅಲಿಯಾಸ್ ಗಾಡ್‌ಫಾದರ್ ಪಾತ್ರದಲ್ಲಿ ಉಪೇಂದ್ರ ಆವರದ್ದು ತೂಕದ ಆಭಿನಯ.
        ಸಿನಿಮಾ ಶುರುವಾಗಿ ಆರ್ಧ ಗಂಟೆ ಕಳೆದ ನಂತರ ಥೇಟ್ ಉಪೇಂದ್ರ ನಿರ್ದೇಶನದ ಸಿನಿಮಾಗಳಂತೆ ತೆರೆದುಕೊಳ್ಳುವ ಕಥೆ, ಸೀಟಿನ ತುದಿಯಲ್ಲಿ ಕುಳಿತು ತಲೆ ಕೆದರ್‍ತಾ, ಇವನ್ಯಾಕೆ ಹೀಗ್ ಮಾಡ್ದಾ?, ಕೊಲೆ ಮಾಡುವಂಥ ಹಿನ್ನಲೆ ಏನು?,  ಮದುವೆಯಾಗೋ ಹುಡುಗಿ ಮನೆಗೆ ನುಗ್ಗಿ ಮಿಸ್ ಬಿಹೇವ್ ಮಾಡಿದ್ಯಾಕೆ?, ಅನವ್ಯಾರು?, ಅವನ ಥರಾನೇ ಇರೋ ಇವನ್ಯಾರು? ಹೀಗೆ ಕುತೂಹಲದ ಪ್ರಶ್ನೆಗಳು ಹುಟ್ಟುತ್ತಾ ಹೋಗುತ್ತವೆ.
        ಸಿನಿಮಾ ಮುಗಿಯೋ ಆರ್ಧ ಗಂಟೆ ಮುಂಚೆ ಪ್ರೇಕ್ಷಕನ ಎಲ್ಲ ಸಂದೇಹಗಳಿಗೂ ಒಂದೊಂದಾಗಿ ಉತ್ತರ ಸಿಗುತ್ತಾ ಹೋಗುತ್ತದೆ. ಚಿಕ್ಕಂದಿನಲ್ಲೇ ಭರತನಾಟ್ಯದ ಕಲೆಯನ್ನು ಕರಗತ ಮಾಡಿಕೊಂಡಿರುವ ಶಿವು ನಡೆದಾಡುವ ಶೈಲಿ ಅತನ ಗಂಡಸ್ತನದ ಮೇಲೆ ಆನುಮಾನ ತರಿಸುತ್ತದೆ. ಇಡೀ ಚಿತ್ರ ನಿಂತಿರುವುದೇ ಈ ನಡಿಗೆಯ ಮೇಲೆ. ಉಪೇಂದ್ರ ಈ ಪಾತ್ರಕ್ಕೆ ಸರಿಯಾಗಿ ತಾಳ-ಮೇಳ ಹಾಕಿ ಚಪ್ಪಾಳೆ ಗಿಟ್ಟಿಸುತ್ತಾರೆ.
        ಬರೋಬ್ಬರಿ ೨ ಗಂಟೆ .೨೯ ನಿಮಿಷ ಸಮಯದ ಗಾಡ್‌ಫಾದರ್‌ನ ಮೊದಲಾರ್ಧ ಪತ್ತೆದಾರಿಯಂತೆ ಕಾಣುತ್ತದೆ. ಎರಡನೇ ಅರ್ಧ ಅದುವರೆಗೂ ನಡೆದ ಘಟನೆಗಳಿಗೆ ಮೂರು ಫ್ಲ್ಯಾಶ್‌ಬ್ಯಾಕ್‌ಗಳಾಗಿ ವಿಭಜನೆ ಹೊಂದಿ ಕೊನೆಗೆ ದುಃಖಾಂತ್ಯ. ಚಿತ್ರದ ಕೊನೆಗೆ ಸಿನಿಮಾದ ಮೇಕಿಂಗ್ ತೋರಿಸೋದು ಕೆಲ ನಿರ್ದೇಶಕರ ಬಯಕೆ. ಆದರೆ ಈ ಚಿತ್ರದ ಕೊನೆಗೆ ಸ್ಪಷ್ಟಿಕರಣ ಕೊಡುವ ಕೆಲ ದೃಶ್ಯಗಳನ್ನು ಗಮನಿಸಿದರೆ ಸಂಕಲನಕಾರ ಬಸವರಾಜ ಅರಸ್ ಅವರ ಶ್ರಮ ಸಮಯವನ್ನು ಹಿಡಿದಿಟ್ಟ ರೀತಿ ಮೆಚ್ಚಲೇಬೇಕು.
          ಜಯಮಾಲಾ ಪುತ್ರಿ ಸೌಂದರ್ಯ ಮೊದಲ ಚಿತ್ರದಲ್ಲೇ ಗಮನ ಸೆಳೆಯುವ ಆಭಿನಯ ನೀಡಿದ್ದಾರೆ. ರಮೇಶ್‌ಭಟ್, ಸುಧಾ ಬೆಳವಾಡಿ, ಸತ್ಯಜೀತ್, ಕುರಿ ಪ್ರತಾಪ್, ಕನ್ನಡರಾಜು, ಸಿಹಿಕಹಿಚಂದ್ರು, ಹೇಮಾಚೌಧರಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎ.ಅರ್.ರಹಮಾನ್ ಸಂಗೀತ ಕನ್ನಡಿಗರ ಮೆದುಳಲ್ಲಿ ಉಳಿಯುವುದು ಕೊಂಚ ಕಷ್ಟವೇ. ಅದರೂ ನನ್ನೆದೆಯಾ ಶ್ರುತಿಯೊಳಗೆ ಹಾಡು ರಾರಾ ರೇಂಜ್‌ಗಿದೆ. ರಾಜೇಶ್ ರಾಮನಾಥ್ ಅವರ ಹಿನ್ನಲೆ ಸಂಗೀತ ಓಕೆ. ಭಾಸ್ಕರ್ ಬರೆದ ಸಂಭಾಷಣೆಯ ಸಾಲುಗಳಲ್ಲಿ “ಪಂಚ್” ಇಲ್ಲ. ಉಪೇಂದ್ರ ಸಿನಿಮಾಗಳಿಗೆ ಬರುವ ಜನ ಮೊನಚಿನ ಡೈಲಾಗ್ಸ್‌ಗಾಗಿ ಬರುತ್ತಾರೆ. ಈ ವಿಷಯದಲ್ಲಿ ಗಾಡ್‌ಫಾದರ್ ಉಪೇಂದ್ರ ಆಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಸೇತು ಶ್ರೀರಾಮ್ ಆವರ ಛಾಯಾಗ್ರಹಣ ಹಾಗೂ ನಿರ್ದೇಶನದ ಬಗ್ಗೆ ತಿದ್ಕೊಳ್ಳುವಂಥದ್ದು ಏನೂ ಇಲ್ಲ. ನಿರ್ಮಾಪಕ ಕೆ.ಮಂಜು ಚಿತ್ರವನ್ನು ತುಂಬಾ ಆದ್ಧೂರಿಯಾಗಿ ನಿರ್ಮಿಸಿ, ಈಗಾಗಲೇ ಸೇಫ್ ಕೂಡಾ ಅಗಿದ್ದಾರೆ. ವಿತರಕ ಪ್ರಸಾದ ಆವರಿಗೂ ಈ ಚಿತ್ರದಿಂದ ಲಕ್ಷ್ಮಿ ಒಲಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
        ಮನೆ ಮಂದಿಯೆಲ್ಲ ಸೇರಿ ಒಟ್ಟಿಗೆ ಕುಳಿತು ನೋಡಲು ಹಿಂಜರಿಕೆ ಬೇಡ. ಯಾಕೆಂದರೆ ಗಾಡ್ ಇಸ್ ಸುಪ್ರೀಂ, ಗಾಡ್‌ಫಾದರ್ ಇಸ್ ಎಕ್ಸ್‌ಟ್ರಿಂ.
   
ಕ್ಲೈಮ್ಯಾಕ್ಸ್…
     ಶುಕ್ರವಾರದಿಂದ ಭಾನುವಾರದವರೆಗೆ ಗಾಡ್‌ಫಾದರ್ ನೋಡಲು ಬರುವ ಸಿನಿಮಾ ಪ್ರೇಕ್ಷಕರಿಗೆ ಈ ಸಿನಿಮಾದ ಅಡಿಯೋ ಸಿಡಿ ಉಚಿತವಾಗಿ ಕೊಡಲಾಗುವುದು ಎಂದು ಈಗಾಗಲೇ ಪ್ರಚಾರ ಮಾಡಲಾಗಿದೆ. ಅದರೆ ನೋಡುಗರು ಮಾತ್ರ “ನಮ್ಗೆ ಸಿಡಿ, ಗಿಡಿ ಏನ್ ಬ್ಯಾಡ, ಸಿನಿಮಾಕೆ ಟಿಕೇಟ್ ಕೊಡಿ ಸಾಕು.” ಅಂತಿದಾರಂತೆ. ಆದಕ್ಕೆ ಥೇಟರ್ ಹೊರಗೆ ಸಿಡಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಯಿತು. ಸಿಡಿ ಬೇಕಾದವ್ರು ೧೦ ರು ಕೊಟ್ಟು ಪಡ್ಕೋಬಹುದು ಎಂಬ ಫಲಕಗಳು ಚಿತ್ರ ಬಿಡುಗಡೆಯಾದ ಕೆಲ ಊರಿನ ಥೇಟರ್‌ಗಳಲ್ಲಿ ನೇತಾಡ್ತಿವೆ.
-ಚಿತ್ರಪ್ರಿಯ ಸಂಭ್ರಮ್.

Leave a Reply