ನವೀನ್ ಸೂರಿಂಜೆ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಮಂಗಳೂರು, ಡಿ.೨೬: ಪಡೀಲ್ ಹೋಂ ಸ್ಟೇ ದಾಳಿ ಹಿನ್ನೆಲೆಯಲ್ಲಿ ಜೈಲು ಪಾಲಾಗಿರುವ ಖಾಸಗಿ ಚಾನೆಲ್ ವರದಿಗಾರ ನವೀನ್ ಸೂರಿಂಜೆ ಮಂಗಳವಾರ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಿಡುಬು (ಚಿಕನ್‌ಪಾಕ್ಸ್) ರೋಗಕ್ಕೆ ತುತ್ತಾಗಿರುವ ನವೀನ್ ಅವರು ಇದೀಗ ವೆನ್ಲಾಕ್ ಆಸ್ಪತ್ರೆಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಮ್ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ವರದಿ ಮಾಡಲು ಹೋಗಿದ್ದ ನವೀನ್ ಸೂರಿಂಜೆಯನ್ನು ಪೊಲೀ ಸರು ‘ಅಪರಾಧಿ’ ಸ್ಥಾನದಲ್ಲಿ ನಿಲ್ಲಿಸಿದ ಕಾರಣ ನ.೭ರಂದು ಬಂಧನಕ್ಕೊಳಗಾಗಿ ನಗರದ ಜೈಲು ಸೇರಿದ್ದರು.
ತನ್ಮಧ್ಯೆ ಅವರ ಜಾಮೀನು ಅರ್ಜಿಯು ಮಂಗಳೂರಿನ ಸತ್ರ ನ್ಯಾಯಾಲಯ ಹಾಗೂ ಮೂರನೆ ಜೆಎಂಎಫ್‌ಸಿ ನ್ಯಾಯಾಲಯದಿಂದ ತಿರಸ್ಕೃತಗೊಂಡಿತ್ತು. ಹಾಗಾಗಿ ರಾಜ್ಯ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಡಿ.೧೨ರಂದು ಅರ್ಜಿಯ ವಿಚಾರಣೆ ನಡೆದು ತೀರ್ಪನ್ನು ಮೀಸಲಿಟ್ಟಿದ್ದರು. ಬಳಿಕ ಚಳಿಗಾಲದ ರಜೆಯ ಕಾರಣ ತೀರ್ಪು ವಿಳಂಬಗೊಂಡಿತ್ತು. ಇದೀಗ ಬುಧವಾರ ರಾಜ್ಯ ಹೈಕೋರ್ಟ್ ‘ಜಾಮೀನು ಅರ್ಜಿ’ ಯನ್ನು ವಜಾ ಮಾಡಿದ್ದು, ನವೀನ್ ಸೂರಿಂಜೆ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗುವುದು ಅನಿವಾರ್ಯವಾಗಿದೆ. 
Please follow and like us:

Related posts

Leave a Comment