ಚುನಾವಣಾ ವೀಕ್ಷಕರಾಗಿ ಎಸ್.ಎನ್. ಬಾಲಚಂದ್ರ ನೇಮಕ

 ಕೊಪ್ಪಳ ಜಿಲ್ಲಾ ವ್ಯಾಪ್ತಿಯ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ವೀಕ್ಷಕರನ್ನಾಗಿ ರಾಜ್ಯ ಚುನಾವಣಾ ಆಯೋಗವು ಕೆ.ಎ.ಎಸ್. ಅಧಿಕಾರಿ ಎಸ್.ಎನ್. ಬಾಲಚಂದ್ರ ಅವರನ್ನು ನೇಮಿಸಿದೆ.
  ನಗರ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ರಾಜ್ಯ ಚುನಾವಣಾ ಆಯೋಗವು ಉದ್ದೇಶಿಸಿದ್ದು,  ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತು ಯಾವುದೇ ದೂರು, ಆಕ್ಷೇಪಣೆ ಇತ್ಯಾದಿಗಳಿದ್ದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ಚುನಾವಣಾ ವೀಕ್ಷಕರ ಗಮನಕ್ಕೆ ತರಬಹುದಾಗಿದೆ.  ಸದಾಚಾರ ನೀತಿ ಸಂಹಿತೆಯ ಯಾವುದೇ ಉಲ್ಲಂಘನೆಗಳಿದ್ದಲ್ಲಿ ಎಸ್.ಎನ್. ಬಾಲಚಂದ್ರ, ಚುನಾವಣೆ ವೀಕ್ಷಕರು, ಮೊಬೈಲ್ ಸಂಖ್ಯೆ : ೮೭೯೨೮೪೧೩೭೯ ಕ್ಕೆ ಕರೆ ಮಾಡಬಹುದಾಗಿದೆ. ದೂರುಗಳನ್ನು ಖುದ್ದಾಗಿ ಸಲ್ಲಿಸುವುದಿದ್ದಲ್ಲಿ, ಕೊಪ್ಪಳದ ಸರ್ಕ್ಯೂಟ್ ಹೌಸ್‌ನಲ್ಲಿ ಖುದ್ದಾಗಿ ಭೇಟಿಯಾಗಿ ಸಲ್ಲಿಸಬಹುದಾಗಿದೆ .

Please follow and like us:
error

Related posts

Leave a Comment