You are here
Home > Koppal News > ೬೦ ಸು-ವರ್ಣ ಕುಸುಮಗಳು , ಗುರುಗುಣಸ್ತವನ ಪುಸ್ತಕ ಬಿಡುಗಡೆ

೬೦ ಸು-ವರ್ಣ ಕುಸುಮಗಳು , ಗುರುಗುಣಸ್ತವನ ಪುಸ್ತಕ ಬಿಡುಗಡೆ

ಕೊಪ್ಪಳದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಪಂಡಿತ್ ರಘುಪ್ರೇಮಾಚಾರ್ಯ ಮುಳಗುಂದ ಇವರ ಷಷ್ಠ್ಯಬ್ದಿ ಸಮಾರಂಭ 
ಕೊಪ್ಪಳ : ಕೊಪ್ಪಳದ ಶ್ರೀ ರಾಯರ   ಸನ್ನಿದಿಯಲ್ಲಿ ರಾಯರ ಅರ್ಚಕರಾದಂತಹ ಪಂ.ಪೂರಘುಪ್ರೇಮಚಾರ್ ಮುಳಗುಂದ ಇವರ ಷಷ್ಠ್ಯಬ್ದಿಯ ನಿಮಿತ್ಯ ದಿನಾಂಕ ೨೫ ರ ಬೆಳಿಗ್ಗೆಯಿಂದ ಸಂಜೆಯವರೆಗೆ ಅನೇಕ ಕಾರ್ಯಕ್ರಮಗಳು ಜರುಗಿದವು. 
ಸಂಜೆಯ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ರಂಗನಾಥ ಆಚಾರ್ಯ ಹುಲಗಿ ಮತ್ತು ಅತಿಥಿಗಳಾದ ಪಂ.ರಾಮಾಚರ್ಯ ಗಂಗೂರ, ಜಯತಿರ್ಥ ಆಚಾರ್ಯ ಅಡವಿ, ಆದ್ಯ ಕೇಶವ ಆಚಾರ್ಯ ಚಿಂತ್ರವೇಲಿ, ಡಾ.ಕೆ.ಜಿ.ಕುಲಕರ್ಣಿ ಇವರುಗಳು ಆಚಾರ್ಯರ ಸಾಧನೆ, ಅವರು ಮಾಡಿದ ಪಾಠ ಪ್ರವಚನಗಳನ್ನು ಹಾಗೂ ಅಚಾರ್ಯರು ಮಾಡಿದ ೩೦ ವರ್ಷಗಳ ರಾಯರ ನಿರಂತರ ಸೇವೆಯನ್ನು ಮನಸಾರೆ ಕೊಂಡಾಡಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಪಂ.ಪೂರಘುಪ್ರೇಮಚಾರ್ಯ ಮುಳಗುಂದ ಇವರಿಂದ ಅನುವಾದಿತವಾದ ಗುರುಗುಣಸ್ತವನ ಪುಸ್ತಕ ಬಿಡುಗಡೆಗೊಂಡಿತು ಹಾಗೂ ಪಂಡಿತ್ ಸಮೀರ ಆಚಾರ್ಯ ಕಂಠಪಲ್ಲಿ ಯವರಿಂದ ಸಂಪದಿತವಾದ ೬೦ ಸು-ವರ್ಣ ಕುಸುಮಗಳು ಎಂಬ ಪುಸ್ತಕವು ಕೂಡಾ ಬಿಡುಗಡೆಯಾಯಿತು. ಶ್ರೀಮಠದ ವತಿಯಿಂದ ಆಚಾರ್ಯ ದಂಪತಿಗಳನ್ನು ಸನ್ಮಾನಿಸಲಾಯಿತು.  ಸಾವಿರಾರು ಭಕ್ತವೃಂದದ  ಸಮಕ್ಷಮದಲ್ಲಿ ಧನ,ಧಾನ್ಯ ತುಲಭಾರದೊಂದಿಗೆ ಈ ಕಾರ್ಯಕ್ರಮ ಸಂಪನ್ನವಾಯಿತು. ಪಂಡಿತ್ ಶ್ರೀನಾಥ ಆಚಾರ್ಯ ಕೊಪ್ಪರ, ಪಂಡಿತ್ ಲಕ್ಷ್ಮೀ ನಾರಾಯಣ ಆಚಾರ್ಯ ಆದೋನಿ, ಪಂಡಿತ  ಎನ್.ಸತ್ಯನಾರಾಯಣ ಆಚಾರ್ಯ, ಶ್ರೀಮಠದ ವ್ಯವಸ್ಥಾಪಕರಾದ ಜಗನಾಥ ಆಚಾರ್ಯ ಹುನುಗುಂದ ಹಾಗೂ ಆಚಾರ್ಯರ ಅನೇಕ ಭಕ್ತವೃಂದ ಸಾರ್ವಜನಿಕರು ಮತ್ತು ಶಿಷ್ತ ವೃಂದದವರು ಉಪಸ್ಥಿತರಿದ್ದರು.

Leave a Reply

Top