ಪ್ರಾದೇಶಿಕ ಆಯುಕ್ತರಿಂದ ನ. ೨೯ ರಂದು ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಗತಿ ಪರಿಶೀಲನೆ

ಗುಲಬರ್ಗಾ ವಿಭಾಗಕ್ಕೆ ಬರುವ ಜಿಲ್ಲೆಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪರಿಶೀಲಿಸಲು ರಾಜ್ಯ ಚುನಾವಣಾ ಆಯೋಗವು ಪ್ರಾದೇಶಿಕ ಆಯುಕ್ತರನ್ನು ಖoಟಟ ಔbseಡಿveಡಿ ರನ್ನಾಗಿ ನೇಮಿಸಿದ್ದು, ಗುಲಬರ್ಗಾದ ಪ್ರಾದೇಶಿಕ ಆಯುಕ್ತರು ನ. ೨೯ ರಿಂದ ವಿವಿಧ ಜಿಲ್ಲೆಗಳ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸುವರು.
  ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನ. ೨೯ ರಂದು   ಮಧ್ಯಾಹ್ನ ೧-೩೦ ಗಂಟೆಗೆ ಮುನಿರಾಬಾದ್‌ನ ಇಂದ್ರಭವನ ಅತಿಥಿ ಗೃಹದಲ್ಲಿ ನಡೆಯಲಿದೆ.  ಈ ಸಭೆಯಲ್ಲಿ ಸಂಬಂಧಿಸಿದ ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರು ಭಾಗವಹಿಸುವಂತೆ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ತಿಳಿಸಿದ್ದಾರೆ.
Please follow and like us:
error