ಒಂದೇ ತಾಸಿನಲ್ಲಿ ಶೌಚಾಲಯ ರೆಡಿ.


ಕೊಪ್ಪಳ-03- ದಿಢೀರ್ ಶೌಚಾಲಯ ನಿರ್ಮಿಸುವ ಮಾದರಿ ಅಭಿವೃದ್ಧಿಪಡಿಸುವ ಮೂಲಕ ಶೌಚಾಲಯ ಕ್ರಾಂತಿಗೆ ಕೊಪ್ಪಳದ ಸುಧನ್ವ
ಎಂಟರ್‍ ಪ್ರೈಸಸ್ ಸಂಸ್ಥೆ ಮುಂದಾಗಿದೆ.

ಸ್ವಚ್ಛಭಾರತ
ಅಭಿಯಾನದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಶೌಚಾಲಯ ಕ್ರಾಂತಿ ಪ್ರಾರಂಭಿಸಿತು. ಆದರೆ, ಬರೀ
ಶೌಚಾಲಯ ಮಾತ್ರ ಕಟ್ಟಲು ಗೌಂಡಿಗಳು, ಗಾರೆ ಕೆಲಸದವರು ಮುಂದಾಗುತ್ತಿರಲಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳಲು
ಪ.ಜಾತಿ/ಪ.ಪಂಗಡದವರಿಗೆ ಸರಕಾರ ರು.೧೫,೦೦೦ ಹಾಗೂ ಇತರ ವರ್ಗದ ಅರ್ಹರಿಗೆ ರು.೧೨,೦೦೦ ಅನುದಾನ ನೀಡುತ್ತದೆ.
ಇಷ್ಟು ಮೊತ್ತಕ್ಕೆ ಯಾವ ವೃತ್ತಿಪರರೂ ಶೌಚಾಲಯ ಸಿದ್ಧಪಡಿಸಲು ಆಸಕ್ತಿ ತೋರುತ್ತಿರಲಿಲ್ಲ. ಹೀಗಾಗಿ, ಪ್ರಚಾರ ಎಷ್ಟೇ ಮಾಡಿದರೂ, ಸರಕಾರ ಏನೇ ಅನುದಾನ ನೀಡಿದರೂ, ಬಹುತೇಕ ಕಡೆ ಶೌಚಾಲಯ ನಿರ್ಮಿಸಿಕೊಳ್ಳಲು ಜನ ಆಸಕ್ತಿ ತೋರದಿರುವುದನ್ನು ನಮ್ಮ ಸಂಸ್ಥೆ ಗಮನಿಸಿತು. ಹೀಗಾಗಿ, ರೆಡಿಮೇಡ್ ಶೌಚಾಲಯಗಳನ್ನು ನಿರ್ಮಿಸುವ ಉದ್ಯಮವನ್ನು ಮಿತ್ರರಾದ ಕೃಷ್ಣ ಶೆಟ್ಟಿ ಹಾಗೂ ಶ್ರೀನಿವಾಸ್ ಟಿ ಜೊತೆಗೂಡಿ ಅಭಿವೃದ್ಧಿಪಡಿಸಲಾಯಿತು. ರಾಜ್ಯದ ವಿವಿಧೆಡೆ ಇಂತಹ ಕೆಲವೊಂದು ಉದ್ಯಮಗಳಿದ್ದರೂ ಬಹುತೇಕ ಕಡೆ ಗುಣಮಟ್ಟವಾಗಲಿ, ಕ್ರಿಯಾಶೀಲತೆಯಾಗಲಿ ಇಲ್ಲದ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ, ಸರಕಾರ ನೀಡುವ ಅನುದಾನದೊಳಗೇ ಸಿದ್ಧವಾಗುವ ಮಾದರಿಗಳನ್ನು ತಯಾರಿಸಲಾಗಿದೆ.
ದಿಢೀರ್ ಶೌಚಾಲಯ.
ಸುಧನ್ವ ಎಂಟರ್ಪ್ರೈಸಸ್ ಹೆಸರಿನಡಿ ನಮ್ಮ ತಂಡ ಕೇವಲ ೧ ತಾಸಿನಲ್ಲಿ ಬಳಕೆಗೆ ಸಿದ್ಧವಾಗುವ ಶೌಚಾಲಯ ಮಾದರಿಗಳನ್ನು ಅಭಿವೃದ್ಧಿಪಡಿಸಿದೆ. ಈ ದಿಢೀರ್ ಶೌಚಾಲಯಗಳನ್ನು ಎಲ್ಲಿ ಬೇಕಾದರೂ ಅಳವಡಿಸಬಹುದು. ಸೆಪ್ಟಿಕ್ ಟ್ಯಾಂಕ್ ನಿರ್ಮಾಣಕ್ಕೆ ಬೇಕಾದ ಗುಂಡಿಯೊಂದು ಸಿದ್ಧವಿದ್ದರೆ ಸಾಕು, ಒಂದೇ ಗಂಟೆಯಲ್ಲಿ ಇಡೀ ಶೌಚಾಲಯವನ್ನು ಜೋಡಿಸಿ, ಬಳಕೆಗೆ ಸಿದ್ಧಪಡಿಸಿ ಕೊಡಲಾಗುತ್ತದೆ. ಹೆಚ್ಚುವರಿ ಖರ್ಚು ಮಾಡಲು ಸಿದ್ಧವಿದ್ದರೆ, ಒಳಭಾಗದಲ್ಲಿ ಟೈಲ್ಸ್, ಮೇಲ್ಭಾಗದಲ್ಲಿ ನೀರಿನ ತೊಟ್ಟಿಯನ್ನೂ ಅಳವಡಿಸಲಾಗುವುದು.
ನಮ್ಮ ಸಂಸ್ಥೆಯ ದಿಢೀರ್ ಶೌಚಾಲಯ ರಾಜ್ಯಾದ್ಯಂತ ಗಮನ ಸೆಳೆಯುತ್ತಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಖಾನಾಪುರ ಗ್ರಾಮ ಇವರ ಶೌಚಾಲಯ ಅಳವಡಿಕೆಯಿಂದ ನೂರಕ್ಕೆ ನೂರು ಪ್ರಮಾಣದಲ್ಲಿ ಶೌಚಾಲಯ ಹೊಂದಿದ ಗ್ರಾಮವಾಗಿದೆ. ಇದೇ ರೀತಿ ಕೊಪ್ಪಳ, ಬೀದರ್, ಚಾಮರಾಜನಗರ, ದಾವಣಗೆರೆ ಮತ್ತು ಗದಗ ಜಿಲ್ಲೆಗಳಲ್ಲಿ ಸಾವಿರಾರು ದಿಢೀರ್ ಶೌಚಾಲಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಇತರ ಜಿಲ್ಲೆಗಳಿಂದಲೂ ಪ್ರಾತ್ಯಕ್ಷಿಕೆಗೆ ಮನವಿಗಳು ಬರತೊಡಗಿವೆ.
ಹಲವಾರು ಮಾದರಿಗಳಿವೆ
ವೈಯಕ್ತಿಕ ಶೌಚಾಲಯವಲ್ಲದೇ, ಬಸ್ ನಿಲ್ದಾಣ, ಪಾರ್ಕ್, ಶಾಲೆ ಮತ್ತಿತರ ಕಡೆ ಗುಂಪು ಶೌಚಾಲಯಗಳನ್ನು ಇದೇ ಮಾದರಿಯಲ್ಲಿ ಒಂದೇ ಗಂಟೆಯಲ್ಲಿ ಅಳವಡಿಸಿ ನೀಡಲಾಗುತ್ತದೆ. ರಾಜ್ಯದ ಹಲವಾರು ಕಡೆ ಇಂಥ ಗುಂಪು ಶೌಚಾಲಯಗಳು, ಸ್ನಾನದ ಮನೆಗಳು, ಶೌಚಾಲಯಸಹಿತ ಸ್ನಾನದ ಮನೆಗಳನ್ನು ನಿರ್ಮಿಸಲಾಗಿದೆ. ಮಕ್ಕಳಿಗೆಂದೇ ವಿಶೇಷ ವಿನ್ಯಾಸದ ಶೌಚಾಲಯಗಳಿವೆ. ಗುಣಮಟ್ಟದಲ್ಲಿ ರಾಜಿ ಇಲ್ಲದ್ದರಿಂದ ಹಾಗೂ ದಾಖಲೆ ಸಮಯದಲ್ಲಿ ನಿರ್ಮಾಣವಾಗುವುದರಿಂದ ಸ್ವಯಂಪ್ರೇರಿತ ಸ್ವಚ್ಛ ಕರ್ನಾಟಕ ಅಭಿಯಾನ ಸದ್ದಿಲ್ಲದೇ ಹಬ್ಬತೊಡಗಿದೆ.

Please follow and like us:
error