fbpx

ಕಟ್ಟಡ ಕಾರ್ಮಿಕ ಕಲ್ಯಾಣ ಸಮಿತಿಯ ನಿಧಿ ನಗರಸಭೆ ಪೌರಾಯುಕ್ತರಿಂದ ದುರ್ಬಳಕೆ ಸಿಪಿಐಎಂಎಲ್ ಆರೋಪ

 ಕಟ್ಟಡ ಮತ್ತು ಇತರೇ ನಿರ್ಮಾಣ, ಕಾರ್ಮಿಕರ ಕಲ್ಯಾಣ ಸಮಿತಿಗೆ ಸೇರಬೇಕಾದ ಸೆಸ್‌ನ್ನು ಗಂಗಾವತಿ ನಗರಸಭೆ ಪೌರಾಯುಕ್ತ ಎ.ಆರ್.ರಂಗಸ್ವಾಮಿ ದುರ್ಬಳಕೆ ಮಾಡಿರುವುದು ರಾಜ್ಯದ ಕಾನೂನುಗಳಿಗೆ ಮಾಡಿದ ದ್ರೋಹವಾಗಿದೆ. ಕೂಡಲೇ ಪೌರಾಯುಕ್ತರನ್ನು ಅಮಾನತ್‌ಗೊಳಿಸಬೇಕೆಂದು ಸಿಪಿಐಎಂಎಲ್ ಪಕ್ಷ ಒತ್ತಾಯಿಸುತ್ತದೆ. 
ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಹತ್ತಾರು ವರ್ಷಗಳಿಂದ ಹೋರಾಟ ಮಾಡಿ ಕಟ್ಟಡ ಮತ್ತು ಇತರೇ ನಿರ್ಮಾಣಗಳ ಕಾರ್ಮಿಕರ ಹಿತರಕ್ಷಣೆಗೆ ಕಲ್ಯಾಣ ಸಮಿತಿಯನ್ನು ಅಸ್ತೀತ್ವಕ್ಕೆ ತರಲಾಗಿದೆ. ರಾಜ್ಯದಲ್ಲಿ ಯಾವುದೇ ನಿರ್ಮಾಣ ಹತ್ತು ಲಕ್ಷಕ್ಕೂ ಮೀರಿ ನಿರ್ಮಿಸಿದ್ದಲ್ಲಿ ೧% ಸೆಸ್ ಕಲ್ಯಾಣ ಸಮಿತಿಗೆ ಜಮಾ ಮಾಡಬೇಕು. ಈ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್‌ಗಳು, ಪಟ್ಟಣ ಪಂಚಾಯತ್‌ಗಳು, ಪುರಸಭೆಗಳು, ನಗರಸಭೆಗಳು ಮತ್ತು ಮಹಾನಗರಪಾಲಿಕೆಗಳಿಗೆ ಒಪ್ಪಿಸಲಾಯಿತು. ವಸೂಲಾದ ಸೆಸ್‌ನ್ನು ಸ್ಥಳೀಯ ಸಂಸ್ಥೆಗಳು ಕೂಡಲೇ ಕಲ್ಯಾಣ ಮಂಡಳಿಗೆ ಜಮಾ ಮಾಡಬೇಕು. ಈ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಗಂಗಾವತಿ ನಗರಸಭೆ ೯ ವರ್ಷಗಳಿಂದ ವಸೂಲಿ ಮಾಡಿದ ಸೆಸ್ ರೂ. ೨೬,೮೦,೦೦೦/- ಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಖಚಿತವಾಗಿದೆ. 
           ನಗರಸಭೆ ಯಾವುದೇ ಕಟ್ಟಡ ಪರವಾನಿಗೆ ನೀಡಬೇಕಾದ್ದಲ್ಲಿ ಹತ್ತು ಲಕ್ಷ ಮೀರಿದ ಪ್ರತಿಯೊಂದು ಕಟ್ಟಡಕ್ಕೂ ೧% ಸೆಸ್ ಕಲ್ಯಾಣ ಮಂಡಳಿಗೆಗಾಗಿ ವಸೂಲು ಮಾಡಬೇಕು. ಆದರೆ ಕೊಟ್ಯಾಂತರ ರೂಪಾಯಿಗಳ ಕಟ್ಟಡ ನಿರ್ಮಾಣ ಮಾಡುತ್ತಿರುವ ಮಾಲೀಕರೊಂದಿಗೆ ಕೂಡಿಕೊಂಡು ಭ್ರಷ್ಠಾಚಾರವೆಸಗಿಕೊಂಡು ಸೆಸ್‌ನ್ನು ಕಾನೂನುಬದ್ಧವಾಗಿ ವಸೂಲಿ ಮಾಡುತ್ತಿಲ್ಲ. ಇದರಿಂದ ಕಟ್ಟಡ ಕಾರ್ಮಿಕರಿಗೆ ಮಾಡುತ್ತಿರುವ ದ್ರೋಹವಾಗಿದೆ. 
         ಒಂಬತ್ತು ವರ್ಷಗಳಿಂದ ಕಟ್ಟಡ ಮತ್ತು ಇತರೇನ ನಿರ್ಮಾಣ ಕಟ್ಟಡ ಕಾರ್ಮಿಕ ಕಲ್ಯಾಣ ಸಮಿತಿಗೆ ಸೆಸ್‌ನ್ನು ಜಮಾ ಮಾಡದ ನಗರಸಭೆ ಅಧಿಕಾರಿ ವಿರುದ್ಧ ಆಯುಕ್ತರು ಕಟ್ಟಡ ಕಾರ್ಮಿಕ ಕಲ್ಯಾಣ ಸಮಿತಿ ಇವರಲ್ಲಿ ದೂರನ್ನು ಸಲ್ಲಿಸಿ ಕಾನೂನುಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದೆಂದು ಭಾರಧ್ವಾಜ್  ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!