ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಗ್ರಂಥಾಲಯ ಸಹಕಾರಿ-ಶಿವರಾಮಗೌಡ

 ಗಂಗಾವತಿ ನಗರದ ವಾ.ನಂ.: ೧೮ ರಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಮಿ ವಿವೇಕಾನಂದ ಗ್ರಂಥಾಲಯದ ಸೇವೆ ಶ್ಲಾಘನೀಯವಾದುದು.ಈ ಗ್ರಂಥಾಲಯವು ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಈಗ ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವುದು ಸಂತಸ ತಂದಿದ್ದು, ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಉಚಿತ ಮನೆಪಾಠ ಪ್ರಾರಂಭಿಸುತ್ತಿರುವುದು, ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ ಹಾಗೂ ಪೆನ್ನುಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ ಕಾರ್ಯವಾಗಿದೆ.
ಸ್ವಾಮಿ ವಿವೇಕಾನಂದ ಗ್ರಂಥಾಲಯದ ಈ ಸೇವೆಯು ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ, ಈ ಗ್ರಂಥಾಲಯದ ಉಪಯೋಗ ಪಡೆಯುವ ವಿದ್ಯಾರ್ಥಿಗಳು ಉನ್ನತ ಶಿಖರಕ್ಕೇರಲಿ. ಈ ಜ್ಞಾನಭಂಡಾರದ ಸೇವೆಯು ಗಂಗಾವತಿ ನಗರದ ಸರ್ವ ಜನತೆಗೆ ತಲುಪುವಂತಾಗಲಿ ಎಂದು ಮಾಜಿ ಲೋಕಸಭಾ ಸದಸ್ಯ ಶಿವರಾಮಗೌಡರು ಹಾರೈಸಿದ್ದಾರೆ.
Please follow and like us:

Related posts

Leave a Comment