ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ

ಕೊಪ್ಪಳ :-  ದಿ. ೧೯  ರಂದು ಗೊಂಡಬಾಳ ಗ್ರಾಮ ಪಂಚಾಯತ ಸಂಭಾಗಣದಲ್ಲಿ ನಿರ್ಮಲ ಭಾರತ ಅಭಿಯಾನದಡಿ “ವಿಶ್ವ ಶೌಚಾಲಯ ದಿನಾಚರಣೆ ಮತ್ತು ಸ್ವಚ್ಚತಾ ಉತ್ಸವಕ್ಕೆ” ಚಾಲನೆ ನೀಡಲಾಗಿದೆ
    ದಿ. ೨೩/೧೧/೨೦೧೨ ರಂದು ಊರಿನ ಬೀದಿ ಬೀದಿಗಳಲ್ಲಿ “ವಿಶ್ವ ಶೌಚಾಲಯ ದಿನಾಚರಣೆ ಹಾಗೂ ಸ್ವಚ್ಛತಾ ಉತ್ಸವ”  ಜಾಥವನು ಶಾಲಾ ಮಕ್ಕಳು, ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು, ಶಾಲಾ ಮುಖ್ಯೋಪಾಧ್ಯಯರು, ಸಹ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ಸಾರ್ವಜನಿಕರು ಭಾಗವಹಿಸಿ ಜಾಥವನ್ನು ಯಶಸ್ವಿಗೊಳಿಸದರು.
    ಈ ಜಾಥದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಸಿದ್ದಪ್ಪ ಕಲಾಲ, ಉಪಾಧ್ಯಕ್ಷರಾದ ಹುಲಗಪ್ಪ ಭಜಂತ್ರಿ, ಶಿಕ್ಷಕರಾದ ಜಿ.ಪಿ.ಹಿರೇಮಠ, ಅಲಿಪೂರ,  ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಯರಾದ ಹಿರೇಮಠ, ಗ್ರಾಮದಲ್ಲಿ ಸ್ವಚ್ಛತೆ ಕಾಪಡಿಕೊಳ್ಳಬೆಕೇಂದು ತಿಳಿಸಿದರು. ಪ್ರಾಥಮಿಕ ಆರೋಗ್ಯ ಅಧಿಕಾರಿಗಳು, ಗ್ರಾ.ಪಂ ಪಿ.ಡಿ.ಓ ಲಕ್ಷ್ಮೀದೇವಿ ಚಲವಾದಿ, ಕಾರ್ಯದರ್ಶಿ ವೆಂಕಟೇಶ ಪವಾರ ಹಾಗೂ ಸಿಬ್ಬಂದಿ ವರ್ಗದವರು, ಊರಿನ ಸಾರ್ವಜನಿಕರು  ಭಾಗವಹಿಸಿ ಜಾಥವನ್ನು ಯಶಸ್ವಿಗೊಳಿಸಿದರು 

Please follow and like us:
error