ಪವಾಡ ರಹಸ್ಯ ಬಯಲು : ವಿಜ್ಞಾನ ವಸ್ತು ಪ್ರದರ್ಶನ

ಆಕಾಶ ವೀಕ್ಷಣೆ 
ಕೊಪ್ಪಳ ;- ಕೊಪ್ಪಳ ತಾಲೂಕಿನ ಸ.ಹಿ.ಪ್ರಾ.ಶಾಲೆ ಕೂಕನಪಳ್ಳಿಯಲ್ಲಿ ಶಿಕ್ಷಣ ಇಲಾಖೆ ಹಾಗೂ ಜಿ.ಎಮ್.ಆರ್.ವರಲಕ್ಷ್ಮಿ ಪ್ರತಿಷ್ಠಾನ ಹೊಸಪೇಟ ಸಂಯುಕ್ತಾಶ್ರಯದಲ್ಲಿ ಇರಕಗಡ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಕಾಶ ವೀಕ್ಷಣೆ ಪವಾಡ ರಹಸ್ಯ ಬಯಲು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಅಮರಮ್ಮ ಅಮರಪ್ಪ ಒಂಟಿಗರ ವಹಿಸಿದ್ದರು. ಉದ್ಘಾಟನೆಯನ್ನು ಶ್ರೀ ಬಸವರಾಜಯ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಟೆಂಗಿನ ಕಾಯಿ ಒಡೆದು ಅದರಲ್ಲಿ ಮಲ್ಲಿಗೆ ಹೂ ಇರುವ ಪವಾಡದ ರಹಸ್ಯ ಬಯಲು ಮಾಡುವ ಮೂಲಕ ನೆರೆವೆರಿಸಿದರು. ಪ್ರಾಸ್ತಾವಿಕವಾಗಿ ಸೋಮಶೇಖರ ಚ ಹರ್ತಿ ಶಿಕ್ಷಣ ಸಂಯೋಜಕರು ಮಾತನಾಡಿ ಗುಣಾತ್ಮಕ ಶಿಕ್ಷಣ ನಿಡುವಲ್ಲಿ ಆಕಾಶ ವೀಕ್ಷಣೆ ನಕ್ಷತ್ರಗಳ ಹಾಗೂ ಗ್ರಹಗಳನ್ನು ವೀಕ್ಷಣೆ ಮಾಡಿಸುವ ಮೂಲಕ ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಅಧ್ಯಯನಕ್ಕೆ ಬುನಾದಿ ಹಾಕುವ ಕಾರ್ಯಕ್ರಮ ಇದಾಗಿದೆ ಎಂದರು. 
  ಉದ್ಘಾಟನೆ ನೆರೆವೇರಿಸಿ ಕ್ಷೇತ್ರ ಶಿಕ್ಷಣಧಿಕಾರಿಗಳಾದ ಬಸವರಾಜಯ್ಯ ಮಾತನಾಡಿ ಶಿಕ್ಷಕರು   ರಾಷ್ಟ್ರದ ಬೆನ್ನೆಲಬು ಕನಸುಗಳು ನನಸಾಗುವ ವೆದಿಕೆಯ ಬುನಾದಿಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿಯೇ ವಿಜ್ಞಾನ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಮೂಡನಂಬಿಕೆಗಳ ಆಚರಣೆ ಹೋಗಲಾಡಿಸುವ ಕುರಿತು. ಶಿಕ್ಷಣ ನೀಡಲು ಕರೆ ನೀಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ದುಡಿದ ಡಾ. ಎ.ಪಿ.ಜೆ ಅಬ್ಧುಲಕಲಾಂ, ಜೆ.ಎನ್.ಟಾಟಾರವರನ್ನು ಸ್ಮರಿಸಲಾಯಿತು. ಅಮರೇಶ ಕಮ್ಮಾರ ಪವಾಡ ಬಯಲು ಕಾರ್ಯಕ್ರಮವನ್ನು ನಡೆಸಿದರು. ವಾಯ್.ಬಿ.ಮೇಟಿ ಮುಖ್ಯ ಗುರುಗಳು ಸ.ಪ್ರೌ.ಶಾಲೆ ಸಂಗನಾಳ, ಆರ್.ಕೆ ರಡ್ಡೇರ್ ಅನ್ನದಾನ ವಿಜಯ ಪ್ರೌಢಶಾಲೆ ನರೆಗಲ್ ಸುನೀಲ ವೈದ್ಯ ಶಂಕರಲಿಂಗ ಪ್ರೌಢಶಾಲೆ ಹೊಂಬಳ , ಶರಣ ಬಸವರಾಜ ಪೂಜಾರ ಕೊಮಲಾಪೂರು, ಕಾಳೇಶ ಪತ್ತಾರ ಹಾಸಗಲ್, ರೆವಣಸಿದ್ದಪ್ಪ ಚನ್ನಿನಾಯಕರ  ಆಕಾಶ ವೀಕ್ಷಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ೫೦ ಶಾಲೆಗಳ ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಪ್ರಯೊಗಗಳನ್ನು ಮಾದರಿಯಾಗಿ ತಯಾರಿಸಿ ಪ್ರದರ್ಶನ  ನೀಡಿದರು ಬಹುಮಾನ ವಿಜೇತ ಶಾಲೆಗಳಿಗೆ ಜಿ.ಎಮ್.ಆರ್ ಕಂಪನಿ  ನಗದು ಬಹುಮಾನ ಹಾಗೂ ಪ್ರಶಸ್ತಿಗಳನ್ನು ನೀಡಿತು. ಪ್ರ್ರೌಢಶಾಲಾ ವಿಭಾಗದಲ್ಲಿ  ಇರಕಲ್‌ಗಡಾ ಪ್ರಥಮ ಸ್ಥಾನ, ಕೂಕನಪಳ್ಳಿ ದ್ವೀತಿಯ ಸ್ಥಾನ, ಲೇಬಗೆರಿ ತೃತೀಯ ಸ್ಥಾನ ಗಳಿಸಿದವು. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಇಂದರಗಿ ಪ್ರಥಮ ಸ್ಥಾನ ತಾಳಕನಕಾಪೂರ  
ದ್ವೀತಿಯ ಸ್ಥಾನ, ಚಾಮಲಾಪೂರ, ದನಗಳದೊಡ್ಡಿ ತೃತೀಯ ಸ್ಥಾನ ಗಳಿಸಿದರು. ಕಿರಿಯ ಪ್ರಾಥಮಿಕ ಶಲಾ ವಿಭಾಗದಲ್ಲಿ ಕೂಕನಪಳ್ಳಿ ಪ್ರಥಮ ಇರಕಲ್‌ಗಡಾ ದ್ವೀತಿಯ, ಜಿನ್ನಾಪೂರ ಚಿಕ್ಕ ತಾಂಡ, ಮುದ್ಲಾಪೂರ ತೃತೀಯ ಸ್ಥಾನವನ್ನು ಗಳಿಸಿದವು. ಸಮಾರೋಪದ ಸಮಾರಂಭದ ಅಧ್ಯಕ್ಷತೆಯನ್ನು ಸೋಮಶೇಖರ.ಚ.ಹರ್ತಿ  ವಹಿಸಿದ್ದರು. ಬಹುಮಾನ ವಿತರಣೆಯನ್ನು ಶಂಭುಲಿಂಗನಗೌಡ ಪಾಟೀಲ. ಎನ್.ಜಿ.ಓ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರು. ನೆರವೇರಿಸಿದರು. ೨ ದಿನಗಳ ಕಾರ್ಯಕ್ರಮದಲ್ಲಿ  ಮಂಜುನಾಥ ಅಧ್ಯಕ್ಷರು ಪ್ರಾ.ಶಾ.ಶಿ.ಸಂಘ ಶರಣಗೌಡ ಪಾಟೀಲ ರಾಜ್ಯ ಸಂಘಟನಾ ಕಾರ್ಯದರ್ಶಿ ವಿರೇಶ ಹಾಗೂ ಸಂತೋಷ ಪ್ರೋಗ್ರಾಮರ್ ಆಫಿಸರ್ ಜಿ.ಎಮ್.ಆರ್ ಕಂಪನಿ ಎಸ್.ಎಲ್.ಡಿ.ಪಿ.ಯ ಶ್ರೀಧರ ರಾಜನಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಹಾಗೂ ಭುದಾನಿಗಳಾದ ಮುತ್ತಣ ಕರಡಿ ವಿರುಪಾಕ್ಷಪ್ಪ ಕರಡಿ, ಸಿ.ಆರ್.ಪಿಗಳಾದ ದ್ಯಾಮಣ್ಣ ಅಬ್ಬಿಗೇರಿ, ಭಿಮಣ್ಣ ಹೂಗಾರ, ಹಾಗೂ ಗ್ರಾ.ಪಂ ಸದಸ್ಯರುಗಳು ಉಪಸ್ಥಿತರಿದ್ದರು. ಪುಂಡಲಿಕಪ್ಪ ಮುಖ್ಯೋಪಾಧ್ಯಯರು ಕಾರ್ಯಕ್ರಮವನ್ನು ನಿರೂಪಿಸಿದರು. ಭಿಮಣ್ಣ ಹೂಗಾರ ಸಿ.ಆರ್.ಪಿ ಸ್ವಾಗತಿಸಿದರು. ಭವ್ಯ ಶಿಕ್ಷಕಿ ಪ್ರಾರ್ಥಿಸಿದರು. ಮಂಜಪ್ಪ  ಕುದರಿ ವಂದಿಸಿದರು.   
 
Please follow and like us:
error