ಚಿಕ್ಕಬಗನಾಳ ಡಿ.೨೨ ರಿಂದ ಡಿ.೨೩ ದುರ್ಗಾದೇವಿ ಹಾಗೂ ಕೆಂಚಮ್ಮದೇವಿ ಜಾತ್ರೆ.

ಕೊಪ್ಪಳ-21- ತಾಲೂಕಿನ ಚಿಕ್ಕಬಗನಾಳ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ಜರುಗುವ ಶ್ರೀ ದುರ್ಗಾದೇವಿ ಹಾಗೂ ಕೆಂಚಮ್ಮದೇವಿಯ ಜಾತ್ರಾ ಮಹೋತ್ಸವ ಡಿ.೨೨ ರಿಂದ ಡಿ.೨೩ ರವರೆಗೆ ಜರುಗಲಿದೆ. ಜಾತ್ರೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.  ಜಾತ್ರೆಯ ಅಂಗವಾಗಿ ಡಿ.೨೩ ರಂದು ರಾತ್ರಿ ೧೦.೩೦ ಕ್ಕೆ ಶ್ರೀ ನರಸಿಂಹೇಶ್ವರ ನಾಟ್ಯ ಸಂಘ ಇವರಿಂದ ಧರ್ಮ ತುಂಬಿದ ಮನೆ ಅರ್ಥಾತ್ ಮಾತು ಸಿಡಿಯಿತು, ಮುತ್ತು ಹೊಡೆಯಿತು! ಎಂಬ ಸಾಮಾಜಿಕ ನಾಟಕ ಜರುಗಲಿದೆ. ಉದ್ಘಾಟನೆಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಸಂಸದ ಸಂಗಣ್ಣ ಕರಡಿ ವಹಿಸುವರು. ಹಿರೇಬಗನಾಳ ಗ್ರಾ.ಪಂ.ಅಧ್ಯಕ್ಷ ಹೇಮಣ್ಣ ದೇವರಮನಿ ಹಾಗೂ ವಿಎಸ್‌ಎಸ್‌ಎನ್ ಅಧ್ಯಕ್ಷ ಜಡಿಯಪ್ಪ ಬಂಗಾಳಿ ಜ್ಯೋತಿ ಬೆಳಗಿಸುವರು.  ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯರಾದ ಕೆ.ರಮೇಶ ಹಿಟ್ನಾಳ, ಡಾ|| ಸೀತಾ ಗೂಳಪ್ಪ ಹಲಗೇರಿ, ಮುಖಂಡ ಕೆ.ಎಂ.ಸಯ್ಯದ್, ತಾ.ಪಂ.ಸದಸ್ಯೆ ಲಕ್ಷ್ಮವ್ವ ದೇವಪ್ಪ ಪೂಜಾರ, ಗ್ರಾ.ಪಂ.ಉಪಾಧ್ಯಕ್ಷೆ ಕಮಲಮ್ಮ ಪಾಂಡುರಂಗನಗೌಡ ಪೊ.ಪಾ., ಗ್ರಾ.ಪಂ.ಸದಸ್ಯರಾದ ಬಸವರಾಜ ಬಂಗಾಳಿ, ಅಲ್ಲಾಸಾಬ ಗೊಂದಿಹೊಸಳ್ಳಿ, ಬನ್ನೆಪ್ಪಗೌಡ, ಅಶೋಕ ದಾಸರ ಸೇರಿದಂತೆ ಗ್ರಾಮದ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
Please follow and like us:
error