ನಗರದ ದಿವಟರ್ ಸರ್ಕಲ್ ಬಳಿಯ ನಿವಾಸಿ ಅನಸೂಯಮ್ಮ ಎಂಬುವವರ ಪತಿ ಚಂದ್ರಪ್ಪ ದೇಸಾಯಿ ಮದ್ಯವ್ಯಸನಿಯಾಗಿದ್ದು ಸದಾ ಕಾಲ ಹೆಂಡತಿಯ ನಡತೆಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿ
ದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಗಂಡ ಹೆಂಡಿರ ಜಗಳ ವಿಕೋಪಕ್ಕೆ ತಿರುಗಿ ಚಂದ್ರಪ್ಪ ದೇಸಾಯಿ ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಹೆಂಡತಿ ಮತ್ತು ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಆರೋಪಿಯನ್ನು ಬಂಧಿಸಿರುವ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Please follow and like us: