ನ. ೨೩ ರಂದು ಹುಲಿಗಿಯಲ್ಲಿ ಬೃಹತ್ ಉದ್ಯೋಗ ಮೇಳ : ೫೦ಕ್ಕೂ ಹೆಚ್ಚು ಕಂಪನಿಗಳು ಭಾಗಿ

 ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ಗ್ರಾಮೀಣ ನಿರುದ್ಯೋಗ ಯುವ ಅಭ್ಯರ್ಥಿಗಳಿಗೆ ಕೌಶಲ್ಯಾಧಾರಿತ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ನ. ೨೩ ರಂದು ರಂದು ತಾಲೂಕಿನ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.
   ಜಿಲ್ಲೆಯಲ್ಲಿ ಈಗಾಗಲೆ ಯೋಜನೆಯಡಿ ಒಟ್ಟು ೫೧೧೮ ಅಭ್ಯರ್ಥಿಗಳು ಭಾಗವಹಿಸಿ, ಸ್ವಯಂ ಉದ್ಯೋಗ ಹಾಗೂ ವೃತ್ತಿ ಕೌಶಲ್ಯಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.  ಉದ್ಯೋಗ ಮೇಳದಲ್ಲಿ ಸುಮಾರು ೫೦ ವಿವಿಧ ಕಂಪನಿಗಳು ಭಾಗವಹಿಸಿ ಅಭ್ಯರ್ಥಿಗಳ ಸಂದರ್ಶನ ನಡೆಸಿ ಉದ್ಯೋಗ ಕಲ್ಪಿಸುವವರಿದ್ದಾರೆ.  ವಿವಿಧ ಕಂಪನಿಗಳ ವಿವರ ಕೆಳಗೆ ಕಾಣಿಸಲಾಗಿದೆ.  ಕೊಪ್ಪಳ ಜಿಲ್ಲೆಯ ಕಿರ್ಲೊಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಹೊಸಪೇಟೆ ಸ್ಟೀಲ್ಸ್ ಲಿಮಿಟೆಡ್ (ಕಲ್ಯಾಣಿ ಸ್ಟೀಲ್ಸ್ & ಮುಕುಂದ್ ಲಿಮಿಟೆಡ್), ಹಿಂದುಸ್ಥಾನ್ ಕೋಕಾಕೋಲಾ ಬೆವರೇಜಸ್ ಪ್ರೈವೆಟ್ ಲಿಮಿಟೆಡ್, ಭೋರುಕಾ ಪವರ್ ಕಾರ್ಪೊರೇಷನ್ ಲಿಮಿಟೆಡ್, ಶ್ರೀ ಇಂದ್ರ ಪವರ್ ಎನೆರ್ಜಿ ಲಿಮಿಟೆಡ್, ಕಪ್ಪಳ ಗ್ರೀನ್ ಪವರ್ ಲಿಮಿಟೆಡ್, ಮೇ/ ರವಿಕಿರಣ ಪವರ್ ಪ್ರೊಜೆಕ್ಟ್ ಲಿಮಿಟೆಡ್, ಧೃವ ದೇಶ ಮೆತಾಸ್ಟೀಲ್ಸ್ ಪ್ರೈವೆಟ್ ಲಿಮಿಟೆಡ್, ಹೊಸಪೇಟೆ ಇಸ್ಪಾತ್ ಲಿಮಿಟೆಡ್, ವಿನಯಾ ಸ್ಟೀಲ್ಸ್ ಪ್ರೈವೇಟ್ ಲಿ. ಹರೇಕೃಷ್ಣ ಮೆಟಲಿಸ್ ಪ್ರೈವೆಟ್ ಲಿಮಿಟೆಡ್, ಪ್ರಾಕ್ಷಿಯಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಬಾಬಾ ಅಖಿಲಾ ಸಾಯಿಜ್ಯೋತಿ ಇಂಡಸ್ಟ್ರೀಸ್ ಪ್ರೈವೆಟ್ ಲಿಮಿಟೆಡ್, ಅಲ್ಟ್ರಾ ಟೆಕ್ ಸಿಮೆಂಟ್ಸ್ ಲಿಮಿಟೆಡ್, ಎಸ್.ಎನ್.ಸಿ. ಫುಡ್ಸ್, ತ್ರಿವಿಸ್ತಾ ಸ್ಟೀಲ್ & ಪವರ್ ಪ್ರೈವೆಟ್ ಲಿಮಿಟೆಡ್, ಕೆಎಂಎಂಐ.ಇಸ್ಪಾತ್ ಪ್ರೈವೆಟ್ ಲಿಮಿಟೆಡ್, ಸ್ಕ್ಯಾನ್ ಇಸ್ಪಾತ್ ಲಿಮಿಟೆಡ್, ಭದ್ರಾಶ್ರೀ ಸ್ಟೀಲ್ & ಪವರ್ ಲಿಮಿಟೆಡ್, ಎಕ್ಸ್-ಇಂಡಿಯಾ ಸ್ಟೀಲ್ ಲಿಮಿಟೆಡ್, ಎಂ.ಎಸ್.ಪಿ.ಎಲ್.ಲಿಮಿಟೆಡ್ ಪೆಲ್ಲೆಟ್ ಪ್ಲಾಂಟ್, ಅಶ್ರಾದ್ ಇಸ್ಪಾತ್, ಐಎಲ್‌ಸಿ ಐರನ್ & ಸ್ಟೀಲ್ಸ್ ಪ್ರೈವೆಟ್ ಲಿಮಿಟೆಡ್, ಹೊಸಪೇಟೆಯ ಹಚ್‌ಆರ್‌ಜಿ. ಅಲೋಯ್ಸ್ & ಸ್ಟೀಲ್ಸ್ ಪ್ರೈವೆಟ್ ಲಿಮಿಟೆಡ್, ಬೆಂಗಳೂರಿನ ಸರವಣ ಅಲೋಯ್ಸ್ ಸ್ಟೀಲ್ಟ್ ಪ್ರೈವೆಟ್ ಲಿಮಿಟೆಡ್, ಹುಬ್ಬಳ್ಳಿಯ ಪಸ್ಟ್ ಸೋರ‍್ಸ್,  ಟ್ರೀಯಾ ಸೊಲೂಶನ್ಸ್, ಆಶಾ ಎಲೆಕ್ಟ್ರಾನಿಕ್ಸ್, ಗ್ಲೋಬಲ್ ಕನ್ಸಲ್ಟೆನ್ಸಿ, ಕನೆಕ್ಟ್ ಕನ್ಸಲ್ಟೆನ್ಸಿ. ಬೆಂಗಳೂರಿನ ಅರವಿಂದ ಮಿಲ್ಸ್, ಐ.ಕೀರ್ತಿ ಟೆಕ್ನಾಲಜಿ, ಯುವ ಜಾಬ್ & ಟ್ರೇನಿಸ್ ಕನ್ಸಲ್ಟೆನ್ಸಿ, ಅಕ್ವೆರಲ್ ಗಾರ್ಮೆಂಟ್ಸ್ ಇಂಟಿಗ್ರಾ ಗಾರ್ಮೆಂಟ್ಸ್, ಟೊಯೊಟೊ, ಟಾಟಾ ಮಾರ್ಕಪೋಲೋ, ಶೋಭಾ ಡೆವಲಪ್ಪರ‍್ಸ್, ಶಾಹಿ ಎಕ್ಸ್‌ಪೋರ್ಟ, ಶ್ರೀ ಸಾಯಿ ಗಾರ್ಮೆಂಟ್ಸ್, ಕೆ.ಮೋಹನ್ ಬಾಂಬೆ ಅಪೇರಲ್ಸ್, ಎ.ಆರ್.ಟಿ.ಜೆ.ಎಸ್., ಶ್ರೀ ರಾಮ್ ನ್ಯೂಹರಿಜನ್ಸ್, ಚೆನ್ನೈನ ಹಿಂದೂಜಾ ಗ್ಲೋಬಲ್ ಸಲ್ಯೂಶನ್ಸ್ ಸೇರಿದಂತೆ ಹಲವು ಕಂಪನಿಗಳು ಉದ್ಯೋಗಮೇಳದಲ್ಲಿ ಉದ್ಯೋಗದಾತರಾಗಿ ಪಾಲ್ಗೊಳ್ಳಲಿದ್ದಾರೆ.  ವಿವಿಧ ಕಂಪನಿಗಳಲ್ಲಿ ೪೦೦೦ ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಉದ್ಯೋಗಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಂಡು, ಉದ್ಯೋಗ ಪಡೆಯಲು ಉತ್ತಮ ಅವಕಾಶ ಒದಗಿಸಲಾಗಿದೆ.
         ಹೆಚ್ಚಿನ ಮಾಹಿತಿಗಾಗಿ ಬಿ.ಕಲ್ಲೇಶ್, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಕೊಪ್ಪಳ – ೯೪೮೧೦೯೯೨೫೬, ಬಸವರಾಜ ಮೂಲಿಮನಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ’ಸಂಜೀವಿನಿ’ ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್, ಕೊಪ್ಪಳ – ೯೬೬೩೬೬೨೩೨೧, ಬಸವರಾಜ ಪಾಟೀಲ್, ಜಿಲ್ಲಾ ವ್ಯವಸ್ಥಾಪಕರು, ’ಸಂಜೀವಿನಿ’ ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್, ಕೊಪ್ಪಳ ೯೪೮೦೬೩೦೩೭೭ ಇವರನ್ನು ಸಂಪರ್ಕಿಸಬಹುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

Leave a Comment