ಗೊಂಡಬಾಳ ಗ್ರಾಮದ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ಜರುಗಿತು.

ಕೊಪ್ಪಳ-15- ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ಕಾರ್ಯಕ್ಮ ಹಮ್ಮಿಕೋಳ್ಳಲಾಗಿತ್ತು.  ಸತತ ತಿಂಗಳ ಪರ್‍ಯಂತರ ನಡೆದ ಈ ಪುರಾಣವನ್ನು ಅಂಬ್ರೇಗೌಡ ವಗರನಾಳ ಪ್ರವಚನ ಮಾಡಿದರು. ಗೂಳನಗೌಡರ ಪರತಗೌಡ ಪುರಾಣ ಫಠಣಮಾಡಿದರು. ಇವರಿಗೆ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಕಳಕಯ್ಯ ಕಾಟರಳ್ಳಿ, ಬಸವರಾಜ ಮೇಟಿ ಸಂಗೀತ ಸೇವೆ ಗೈದರು. ಶರಣಪ್ಪ ಹೂಗಾರ ಪೂಜೇ ಸೇವೆ ಗೈದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕುಂಬಮೇಳ, ಮತ್ತು ಎತ್ತುಗಳ ಮೆರವಣೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಸಂಧರ್ಭದಲ್ಲಿ ಗ್ರಾಮದ ಗುರು ಹಿರಿಯರು, ಚುನಾಯಿತ ಪ್ರತಿನಿಧಿಗಳು, ಯುವ ಮಿತ್ರರು, ಮಾರುತೇಶ್ವರ ಮತ್ತು ಶರಣಬಸವೇಶ್ವರ ಭಜನಾಸಂಘ, ಸಂಘ ಸಂಸ್ಥೆಗಳ ಪದಾದಿಕಾರಿಗಳು ಉಪಸ್ಥಿತರಿದ್ದರು.

Please follow and like us:
error