ಜೆಡಿಎಸ್ ಪಕ್ಷವನ್ನು ಜಿಲ್ಲೆಯಲ್ಲಿ ಬಲಿಷ್ಠಗೊಳಿಸುವೆ-ಪ್ರದೀಪ್‌ಗೌಡ ಮಾಲೀಪಾಟೀಲ್.

ಕೊಪ್ಪಳ-24- ಜೆಡಿಎಸ್ ಪಕ್ಷವನ್ನು ಜಿಲ್ಲೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗೂಡಿ ಬಲಿಷ್ಠಗೊಳಿಸುವೆ ಎಂದು ನೂತನ ಜೆಡಿಎಸ್ ಜಿಲ್ಲಾಧ್ಯಕ್ಷ ಪ್ರದೀಪ್‌ಗೌಡ ಮಾಲೀಪಾಟೀಲ್ ಹೇಳಿದರು.
ಅವರು ಮಂಗಳವಾರದಂದು ಕನಕಗಿರಿಯ ಪ್ರವಾಸಿಮಂದಿರದಲ್ಲಿ ಜೆಡಿಎಸ್ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೆವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ,ಕುಮಾರಸ್ವಾಮಿಯವರ ಸಲಹೆ-ಸೂಚನೆ ಮೇರೆಗೆ ಕೊಪ್ಪಳ ಜಿಲ್ಲೆಯಲ್ಲಿ ಪಕ್

ಷವನ್ನು ತಳಮಟ್ಟದಿಂದ ಸಂಘಟಿಸಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರ ಜೊತೆಗೆ ಚರ್ಚಿಸಿ ಪಕ್ಷವನ್ನು ಸಂಘಟಿಸಿ, ಬಲಿಷ್ಠಗೊಳಿಸುವೆ ಜೆಡಿಎಸ್ ಪಕ್ಷಕ್ಕೆ ಹಳ್ಳಿ-ಹಳ್ಳಿಯಲ್ಲಿ ಕಾರ್ಯಕರ್ತರು ಇದ್ದಾರೆ, ಮುಂಬರುವ ವಿಧಾನಪರಿಷತ್ ಚುನಾವಣೆ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು ನಿಶ್ಚಿತ ಹೀಗಾಗಿ ಪಕ್ಷದ ಕಾರ್ಯಕರ್ತರು ಪಕ್ಷವನ್ನು ಗೆಲ್ಲಿಸಲು ಸಿದ್ಧರಾಗಿರಬೇಕು, ಜೆಡಿಎಸ್ ಪಕ್ಷ ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳುತ್ತದೆ, ಕಾಂಗ್ರೆಸ್-ಬಿಜೆಪಿ ಪಕ್ಷಕ್ಕೆ ಹೋದ ಮುಖಂಡರು-ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ವಾಪಸ್ ಮರಳಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರ ಕೈ ಬಲಪಡಿಸಬೇಕು ಎಂದರು.  ಈ ಸಂದರ್ಭದಲ್ಲಿ ಕನಕಗಿರಿ ಜೆಡಿಎಸ್ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನಗೌಡ ಹೊಸಮನಿ,ವೀರಭದ್ರಗೌಡ ಹೊಸಕೇರಿ,ಖಾಜಾಹುಸೇನ ಮುಲ್ಲಾ, ಬೀರಪ್ಪ ಕನಕಗಿರಿ, ಉಮೇಶ ದೇವರಡ್ಡಿ, ಕನಕರಡ್ಡಿಗೌಡ ಹೊಸಕೇರಿ,ಡಾ.ಶಾಹಬುದ್ದೀನ್ ಕನಕಗಿರಿ,ಡಾ.ಅಜೀಜ್, ರಸೂಲ್‌ಸಾಬ ಮಕಂದರ್, ಸತ್ಯನಾರಾಯಣ ಜಂಗಮರಕಲ್ಗುಡಿ, ಶ್ರೀನಿವಾಸ ಪತ್ತಾರ್ ಕಾರಟಗಿ, ಜಗದೀಶ್‌ಗೌಡ ಯರಡೋಣಿ, ಆದಣ್ಣ ಮುಷ್ಟೂರು, ಮಲ್ಲಿಕಾರ್ಜುನ ಬಸಶೆಟ್ಟರ್, ಇಮಾಮ್‌ಸಾಬ ಸಿದ್ದಾಪುರು ಸೇರಿದಂತೆ ಪಕ್ಷದ ಕರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply