You are here
Home > Koppal News > ಧನಾತ್ಮಕ ಚಿಂತನೆ ಕಿರು ಚಿತ್ರದ ಚಿತ್ರೀಕರಣ ಪೂರ್ಣ

ಧನಾತ್ಮಕ ಚಿಂತನೆ ಕಿರು ಚಿತ್ರದ ಚಿತ್ರೀಕರಣ ಪೂರ್ಣ

ಕೊಪ್ಪಳ, ಏ. ೧. ಕೊಪ್ಪಳದ ಸಾಹಿತ್ಯ ಎಂಟರ್‌ಪ್ರೈಸಸ್‌ನ ಶ್ರೀ ಆಂಜನೇಯ ಪಿಕ್ಚರ್‍ಸ್ ವತಿಯಿಂದ ಧನಾತ್ಮಕ ಚಿಂತನೆ ಎಂಬ ಅತ್ಯಂತ ಕಿರು ಚಿತ್ರದ ಚಿತ್ರೀಕರಣ ನಗರದಲ್ಲಿ ನಡೆಯಿತು.
ಸಂಭಾಷಣೆ ಮತ್ತು ಪ್ರಧಾನ ನಿರ್ದೇಶನವನ್ನು ವಿಜಯ ಅಮೃತರಾಜ್ ಮಾಡಿದ್ದು, ನಿರ್ಮಾಣ ಮತ್ತು ನಿರ್ದೇಶನವನ್ನು ಬೆಳ್ಳಿ ಮಂಡಲ ಜಿಲ್ಲಾ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾಡಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಶೇಖ್ ಇದಾಯತ್ ಮತ್ತು ದುಬೈ ಬಾಬು, ಸಹಾಯಕ ನಿರ್ದೇಶಕರಾಗಿ ರಾಜೀವ್ ಸಿ.ಎನ್. ಕಾರ್ಯಮಾಡಿದ್ದು, ವಸ್ತ್ರಾಲಂಕಾರ ಜ್ಯೋತಿ ಎಂ. ಗೊಂಡಬಾಳ, ಪ್ರೊಡಕ್ಷನ್ ಮ್ಯಾನೇಜರ್ ರಾಗಿ ವಿಜಯಕುಮಾರ ಗೊಂಡಬಾಳ ಕಾರ್ಯನಿರ್ವಹಿಸಿದ್ದಾರೆ.
ವಿಠ್ಠಲ ಮಾಲಿಪಾಟೀಲ ಮತ್ತು ಸರಕಾರಿ ಅಭಿಯೋಜಕ ಬಿ.ಎಸ್. ಪಾಟೀಲ ಧನಾತ್ಮಕ ಚಿಂತನೆಯಲ್ಲಿ ಪಾತ್ರ ಮಾಡಿದ್ದಾರೆ. ಯೂ ಟ್ಯೂಬ್ ನಲ್ಲಿ ಈ ಕಿರುಚಿತ್ರವನ್ನು ಹಾಕಲಾಗುವದು ಜೊತೆಗೆ ಮುಂದಿನ ತಿಂಗಳು ಬಿಜಾಪುರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಿರುಚಿತ್ರ ಉತ್ಸವ ಮತ್ತು ಪ್ರದರ್ಶನದಲ್ಲಿ ಸ್ಪರ್ಧೆಗೆ ಕಳುಹಿಸಿಕೊಡಲಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಗಡ್ಡಿಮಠ ಕಿರುಚಿತ್ರ :  ಕೊಪ್ಪಳ ತಾಲೂಕಿನ ಬಂಡಿಹರ್ಲಾಪೂರ ಪ್ರಸಿದ್ಧ ಸುಕ್ಷೇತ್ರವಾದ ಶ್ರೀ ಶಾಂತಲಿಂಗೇಶ್ವರ ಮಠ ನಗರಗಡ್ಡಿಮಠದ ಕಿರುಚಿತ್ರವನ್ನು ತಯಾರಿಸಲಾಗುತ್ತಿದ್ದು ಇದೇ ತಿಂಗಳು ನಡೆಯುವ ಜಾತ್ರೆಯಲ್ಲಿ ಚಿತ್ರೀಕರಿಸಲಾಗುತ್ತಿದೆ ಎಂದು ಸಾಹಿತ್ಯ ಎಂಟರ್‌ಪ್ರೈಸಸ್‌ನ ಮಾಲೀಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.

Leave a Reply

Top