ಏಪ್ರಿಲ್ ೧೫, ೧೬, ೧೭ ರಂದು ರಕ್ತದಾನ ಶಿಬಿರ

     ಕೊಪ್ಪಳ. ಜಿಲ್ಲೆಯ ಕೊಪ್ಪಳ, ಗಂಗಾವತಿ ಹಾಗೂ ಕುಷ್ಟಗಿ ತಾಲೂಕಿನಲ್ಲಿ ಏಪ್ರಿಲ್ ೧೫, ೧೬, ೧೭ ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಗೊಂಡಬಾಳ – ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ದಿ. ೧೫ ರಂದು ಬುಧವಾರ ಶ್ರೀ ಕರಿಯಮ್ಮ ದೇವಿ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಅಂದು ಬೆಳಿಗ್ಗೆ ೦೮ ರಿಂದ ೦೪ ಗಂಟೆಯವರೆಗೆ ಜರುಗಲಿದೆ. 
ಕೋಳೂರು – ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದಲ್ಲಿ ದಿ. ೧೬ ರಂದು ಗುರುವಾರ ಬೆಳಿಗ್ಗೆ ೦೯ ರಿಂದ ೦೩ ಗಂಟೆಯವರೆಗೆ ಸರಕಾರಿ ಪದವಿ ಕಾಲೇಜಿನ ಎನ್. ಎಸ್. ಎಸ್. ಘಟಕದ ವತಿಯಿಂದ ಶಿಬಿರ ಆಯೋಜಿಸಲಾಗಿದೆ.
ಗಂಗಾವತಿ – ಗಂಗಾವತಿ ನಗರದ ಟಿ. ಎಮ್. ಎ. ಇ. ಸೊಸೈಟಿ ಬಿ.ಎಡ್      ಕಾಲೇಜಿನಲ್ಲಿ ದಿ. ೧೭ ರಂದು ಶುಕ್ರವಾರ ಬೆಳಿಗ್ಗೆ ೧೧ ರಿಂದ ೦೫ ಗಂಟೆಯವರೆಗೆ ರೋಟರಿ ಕ್ಲಬ್, ಗಂಗಾವತಿ ಇವರಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಎಲ್ಲಾ ಶಿಬಿರಗಳಲ್ಲಿ ಆಸಕ್ತರು ರಕ್ತದಾನ ಮಾಡಿ ಸಹಕರಿಸುವಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ  ಕೋರಿದ್ದಾರೆ. 

Leave a Reply