ಕೊಪ್ಪಳ : ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ

ಕೊಪ್ಪಳ ಮೇ ೨೦ : ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಗೊಂಡಿದೆ.
ಕೊಪ್ಪಳ ಜಿಲ್ಲೆಯ ೧೩೪ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಕಲ್ಪಿಸಿರುವ ವಿವರ ಇಂತಿದೆ. ಅನುಸೂಚಿತ ಜಾತಿಗೆ ೦೯ ಮಹಿಳೆಯರು ಸೇರಿದಂತೆ ೨೬ ಸ್ಥಾನಗಳು, ಅನುಸೂಚಿತ ಪಂಗಡಕ್ಕೆ ೦೭ ಮಹಿಳೆಯರು ಸೇರಿದಂತೆ ೨೧ ಸ್ಥಾನಗಳು, ಹಿಂದುಳಿದ ವರ್ಗ “ಅ” ಕ್ಕೆ ೧೧ ಮಹಿಳೆಯರು ಸೇರಿ ೩೫ ಸ್ಥಾನಗಳು, “ಂದುಳಿದ ವರ್ಗ”ಬ” ವರ್ಗಕ್ಕೆ ೦೪ ಮಹಿಳೆಯರು ಸೇರಿ ೦೯ ಸ್ಥಾನಗಳು ಹಾಗೂ ಸಾಮಾನ್ಯ ವರ್ಗಕ್ಕೆ ೧೪ ಮಹಿಳೆಯರು ಸೇರಿ ೪೩ ಸ್ಥಾನಗಳು ಮೀಸಲಿರಿಸಲಾಗಿದೆ.
ಯಲಬುರ್ಗಾ ತಾಲೂಕು ವ್ಯಾಪ್ತಿಯ ೩೩ ಗ್ರಾಮ ಪಂಚಾಯತಿಗಳಿಗಾಗಿ ಅನುಸೂಚಿತ ಜಾತಿಗೆ ೦೨ ಮ”ಳೆಯರು ಸೇರಿದಂತೆ ೦೫ ಸ್ಥಾನಗಳು, ಅನುಸೂಚಿತ ಪಂಗಡಕ್ಕೆ ೦೧ ಮ”ಳೆ ಸೇರಿದಂತೆ ೦೪ ಸ್ಥಾನಗಳು, ಹಿಂದುಳಿದ ವರ್ಗ “ಅ” ಕ್ಕೆ ೦೩ ಮಹಿಳೆಯರು ಸೇರಿ ೦೯ ಸ್ಥಾನಗಳು, ಹಿಂದುಳಿದ ವರ್ಗ”ಬ” ವರ್ಗಕ್ಕೆ ೦೧ ಮಹಿಳೆ ಸೇರಿ ೦೨ ಸ್ಥಾನಗಳು ಹಾಗೂ ಸಾಮಾನ್ಯ ವರ್ಗಕ್ಕೆ ೦೪ ಮಹಿಳೆಯರು ಸೇರಿ ೧೩ ಸ್ಥಾನಗಳು ಮೀಸಲಿರಿಸಲಾಗಿದೆ. ಕುಷ್ಟಗಿ ತಾಲೂಕಿನ ೨೮ ಗ್ರಾ.ಪಂ.ಗಳಿಗಾಗಿ ಅನುಸೂಚಿತ ಜಾತಿಗೆ ೦೨ ಮಹಿಳೆಯರು ಸೇರಿದಂತೆ ೦೫ ಸ್ಥಾನಗಳು, ಅನುಸೂಚಿತ ಪಂಗಡಕ್ಕೆ ೦೨ ಮಹಿಳೆ ಸೇರಿದಂತೆ ೦೫ ಸ್ಥಾನಗಳು, ಹಿಂದುಳಿದ ವರ್ಗ “ಅ” ಕ್ಕೆ ೦೨ ಮಹಿಳೆಯರು ಸೇರಿ ೦೭ ಸ್ಥಾನಗಳು, ಹಿಂದುಳಿದ ವರ್ಗ”ಬ” ವರ್ಗಕ್ಕೆ ೦೧ ಮಹಿಳೆ ಸೇರಿ ೦೨ ಸ್ಥಾನಗಳು ಹಾಗೂ ಸಾಮಾನ್ಯ ವರ್ಗಕ್ಕೆ ೦೩ ಮ”ಳೆಯರು ಸೇರಿ ೦೯ ಸ್ಥಾನಗಳನ್ನು “ಸಲಿರಿಸಿದೆ. ಗಂಗಾವತಿ ತಾಲೂಕಿನ ೩೮ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಅನುಸೂಚಿತ ಜಾತಿಗೆ ೦೩ ಮ”ಳೆಯರು ಸೇರಿದಂತೆ ೦೯ ಸ್ಥಾನಗಳು, ಅನುಸೂಚಿತ ಪಂಗಡಕ್ಕೆ ೦೩ ಮ”ಳೆ ಸೇರಿದಂತೆ ೦೮ ಸ್ಥಾನಗಳು, “ಂದುಳಿದ ವರ್ಗ “ಅ” ಕ್ಕೆ ೦೩ ಮ”ಳೆಯರು ಸೇರಿ ೧೦ ಸ್ಥಾನಗಳು, “ಂದುಳಿದ ವರ್ಗ”ಬ” ವರ್ಗಕ್ಕೆ ೦೧ ಮ”ಳೆ ಸೇರಿ ೦೩ ಸ್ಥಾನಗಳು ಹಾಗೂ ಸಾಮಾನ್ಯ ವರ್ಗಕ್ಕೆ ೦೩ ಮ”ಳೆಯರು ಸೇರಿ ೦೮ ಸ್ಥಾನಗಳು “ಸಲಿರಿಸಲಾಗಿದೆ. ಕೊಪ್ಪಳ ತಾಲೂಕಿನ ೩೫ ಗ್ರಾಮ ಪಂಚಾಯತಿಗಳಿಗಾಗಿ ಅನುಸೂಚಿತ ಜಾತಿಗೆ ೦೨ ಮ”ಳೆಯರು ಸೇರಿದಂತೆ ೦೭ ಸ್ಥಾನಗಳು, ಅನುಸೂಚಿತ ಪಂಗಡಕ್ಕೆ ೦೧ ಮಹಿಳೆ ಸೇರಿದಂತೆ ೦೪ ಸ್ಥಾನಗಳು, “ಂದುಳಿದ ವರ್ಗ “ಅ” ಕ್ಕೆ ೦೩ ಮ”ಳೆಯರು ಸೇರಿ ೦೯ ಸ್ಥಾನಗಳು, “ಂದುಳಿದ ವರ್ಗ”ಬ” ವರ್ಗಕ್ಕೆ ೦೧ ಮಹಿಳೆ ಸೇರಿ ೦೨ ಸ್ಥಾನಗಳು ಹಾಗೂ ಸಾಮಾನ್ಯ ವರ್ಗಕ್ಕೆ ೦೪ ಮ”ಳೆಯರು ಸೇರಿ ೧೩ ಸ್ಥಾನಗಳು “ಸಲಿರಿಸಲಾಗಿದೆ.
ರಾಜ್ಯ ಚುನಾವಣಾ ಆಯೋಗದ ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೆ ಒಳಪಟ್ಟು ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳೆಯರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ನಡೆಸಬೇಕಾಗಿರುತ್ತದೆ. ತಾಲೂಕುವಾರು ಮೀಸಲಿರಿಸಿದ ವಿವಿಧ ವರ್ಗಗಳಿಗೆ, ಮಹಿಳೆಯರಿಗೆ ಮತ್ತು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಲಾಗಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಕೋಟಾವನ್ನು ಉಲ್ಲಂಘನೆಯಾಗದಂತೆ “ಸಲಾತಿಯನ್ನು ಜೂನ್ ೦೫ ರ ಒಳಗಾಗಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಬೇಕಾಗಿರುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
Please follow and like us:
error