You are here
Home > Koppal News > ಜಿಲ್ಲಾಕಾರಾಗೃಹದಿಂದ ಖೈದಿಗಳ ಪರಾರಿ

ಜಿಲ್ಲಾಕಾರಾಗೃಹದಿಂದ ಖೈದಿಗಳ ಪರಾರಿ

ಕೊಪ್ಪಳ : ಕೊಪ್ಪಳ ಜಿಲ್ಲಾ ಕಾರಾಗೃಹದಿಂದ ವಿಚಾರಾಣಾಧೀನ ಕೈದಿಗಳು ತಪ್ಪಿಸಿಕೊಂಡಿದ್ದಾರೆ. ಸಿನಿಮಿಯ ರೀತಿಯಲ್ಲಿ ಜೈಲಿನಿಂದ ಪರಾರಿಯಾಗಿರುವ ಎಂಟು ಖೈದಿಗಳು ಬೆಳಗಿನ ಜಾವ ಇಲ್ಲವೇ ಮಧ್ಯ ರಾತ್ರಿ ತಪ್ಪಿಸಿಕೊಂಡಿರಬಹುದು ಎನ್ನಲಾಗುತ್ತಿದೆ. ಬೆಳಿಗ್ಗೆ 6 ಗಂಟೆಗೆ ಎಣಿಕೆ ಮಾಡುವಾಗ ಇದು ಕಂಡು ಬಂದಿದೆ. ರಗ್ಗುಗಳನ್ನು ಹಗ್ಗದಂತೆ ಬಳಸಿ ಈ ಖೈದಿಗಳು ಪರಾರಿಯಾಗಿದ್ದಾರೆ. ಸುಕೋ ಬ್ಯಾಂಕ್ ದರೋಡೆ ಪ್ರಕರಣ ಮತ್ತು ಖೋಟಾ ನೋಟು ಚಲಾವಣೆಯ ಪ್ರಕರಣದಲ್ಲಿ ಈ ಖೈದಿಗಳನ್ನು ಬಂಧಿಸಲಾಗಿತ್ತು. ಪರಾರಿಯಾಗಿರುವ ಖೈದಿಗಳ ಬಂಧನಕ್ಕಾಗಿ ವ್ಯಾಪಕ ಜಾಲ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Leave a Reply

Top