ಕ್ಷುಲ್ಲಕ ಕಾರಣಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ

ಗಂಗಾವತಿ ; ಗ್ರಾಮ ಪಂಚಾಯತ್ ಚುನಾವಣೆಗಳು ಸಮೀಪಿಸುತ್ತಿರುವಂತೆಯೆ ಎಲ್ಲೆಡೆ ಚುನಾವಣಾ ಕಾವು ಏರುತ್ತಿದೆ. ನಿನ್ನೆ ಗಂಗಾವತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದೆ. ಕಾಂಗ್ರೆಸ್ ಮುಖಂಡ ಹೊಸಕೇರಿಯ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ರಾಮಮನೋಹರಾವ್ ಮೇಲೆ ಹಲ್ಲೆ ನಡೆಸಿದ್ದು ಅವರ ಮನೆ ಮೇ ಲೆ ಕಲ್ಲುತೂರಾಟ ನಡೆಸಿದ್ದಾ.ರೆ ಗಾಯಗೊಂಡಿರುವ ರಾಮಮನೊಹರರಾವ , ವೆಂಕಟರಾವ ಮತ್ತು ಗೋಪಾಲಕೃಷ್ಣ ೆನ್ನುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘರ್ಷಣೆ ನಡೆದ ಸಂದರ್ಭದಲ್ಲಿ ತಮ್ಮ ಕೊರಳಲಿದ್ದ ಚಿನ್ನದ ಸರವನ್ನು ಅಪಹರಿಸಿದ್ದಾರೆ ಎಂದು ರಾಮಮನೋಹರ ರಾವ್ ದೂ ರುನೀಡಿದ್ದು ಪರಸ್ಪರ ಪ್ರಕರಣಗಳ ದಾಖಲು ಮಾಡಿಕೊಂಡು ಕೆಲವರನ್ನು ಬಂಧಿಸಲಾಗಿದೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.

Leave a Reply