ಕೊಪ್ಪಳ ಜಿಲ್ಲಾ ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕೊಪ್ಪಳ,ಆ.೧೪: ಕೊಪ್ಪಳ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ನಾಗರಾಜ ಜುಮ್ಮಣ್ಣನವರ, ರಾಜ್ಯ ಪರಿಷತ್ತ ಸದಸ್ಯರಾಗಿ ಧನಂಜಯ ಮಾಲಗಿತ್ತಿ ಹಾಗೂ ಖಜಾಂಚಿಯಾಗಿ ಸುಶೀಲೇಂದ್ರರಾವ್ ದೇಶಪಾಂಡೆರವರು ಆ.೧೫ ರ ಮಧ್ಯಾಹ್ನ ೧೨.೩೦ ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಕ ಬೀರಪ್ಪ ಅಂಡಗಿ ಚಿಲವಾಡಗಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ನಿರ್ದೇಶಕರು, ಪದಾಧಿಕಾರಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಶಿಕ್ಷಕ ಬೀರಪ್ಪ ಅಂಡಗಿ ಚಿಲವಾಡಗಿ  ತಿಳಿಸಿದ್ದಾರೆ.

Leave a Reply