ಕಿನ್ನಾಳ ಗ್ರಾಮದಲ್ಲಿ ೨೧ ನೇ ಅಯ್ಯಪ್ಪ ಸ್ವಾಮಿಯ ಮಹಾಪೂಜೆ

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ೨೧ ನೇ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯನ್ನು ಏರ್ಪಡಿಸಲಾಗಿತ್ತು. ಕಿನ್ನಾಳಿನ ಕಲಾವಿದ ಬಾಷಾ ಹಿರೇಮನಿ ನಾಯಕತ್ವದ ಖ್ಯಾತ ವಾಧ್ಯಗೋಷ್ಠಿ, ಶ್ರೀ ಅಭಿನವ ಮೆಲೋಡಿಸ್ ಕೊಪ್ಪಳ ಇವರಿಂದ ಭಕ್ತಿ ಗೀತೆಗಳ ಕಾರ್ಯಕ್ರಮ ನೆರವೆರಿಸಲಾಗಿತ್ತು. ವಿಶೇಷವಾಗಿ ಆಹ್ವಾನದ ಮೇರಿಗೆ ಕುಷ್ಟಗಿಯ ಗ್ರಾಮೀಣ ಪೊಲೀಸ್ ಅಧಿಕಾರಿಗಳಾದ ಆರ್ ಎಸ್ ವುಜ್ಜೆನಕೊಪ್ಪ ಇವರು ಭಕ್ತಿ ಹಾಗೂ ಭಾವಗೀತೆಗಳನ್ನು ಹಾಡಿ ಸೇರಿದ್ದ ಜನಸಾಗರದ ಮನಸ್ಸನ್ನು ಗೆದ್ದರು. ನಂತರ ಕಿನ್ನಾಳಿನ ಭಕ್ತರು ಎಲ್ಲಾ ಕಲಾವಿದರಿಗೆ ಸನ್ಮಾನಿಸಿದರು. ಕಲಾವಿದರಾದ ಬಾಷಾ ಹಿರೇಮನಿ, ಮಾರೇಶ ಅಗಳಕೆರಿ, ಶಿವಶರಣಯ್ಯ ಮ್ಯಾಗಳಮಠ, ನಂದೀಶ ಮುನಿರಾಬಾದ್, ತೋಟೇಶ ಬೆಲ್ಲದ್ ಶೇಖರ, ಗಂಗಾಧರ ಅರಳಿಕಟ್ಟಿ, ವಿರೇಶ ಬಡಿಗೇರ, ಕಲಾವಿಧರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶ್ವಸ್ವಿಗೊಳಿಸದರು.    

Leave a Reply