ಸಂಗಣ್ಣರಿಂದ ಶ್ರೀಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ಭವನದ ಭೂಮಿ ಪೂಜೆ.

ಕೊಪ್ಪಳ,ಆ,೧೮  ನಗರದ ಸಂಸ್ಥಾನ ಶ್ರೀಗವಿಸಿದ್ಧೇಶ್ವರ ಮಠದ ಆವರಣದಲ್ಲಿ  ಸೋಮವಾರ ಸಾಯಂಕಾಲ ಶ್ರೀಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ಭವನದ ಭೂಮಿ ಪೂಜೆಯನ್ನು ಮಾನ್ಯ ಸಂಸದರಾದ ಸಂಗಣ್ಣ ಕರಡಿ ನೆರೆವೇರಿಸಿದರು. ಈ ಭವನದ ಬೃಹತ್ ಕಟ್ಟಡಕ್ಕೆ  ಮಾನ್ಯ ಸಂಸದರಾದ ಕರಡಿ ಸಂಗಣ್ಣನವರು ತಮ್ಮ ಅನುದಾನದಲ್ಲಿ ೨೫ ಲಕ್ಷ ರೂಪಾಯಿಗಳನ್ನು ೨೦೧೪-೧೫ ನೇ ಸಾಲಿನ ಅನುದಾನದಲ್ಲಿ ನೀಡಿದ್ದಾರೆ. ಮಠದ ಆವರಣದಲ್ಲಿ  ಇಂದು ಸಾಯಂಕಾಲ ಜರುಗಿದ ಭೂಮಿ ಪೂಜೆಯ ಸಮಾರಂಭದ ಸಾನಿಧ್ಯವನ್ನು ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ವಹಿಸಿದ್ದರು.  ಈ ಸಂದರ್ಭದಲ್ಲಿ ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ. ಟ್ರಸ್ಟ ಕಾರ್ಯದರ್ಶಿ ಮಲ್ಲಿಕಾರ್ಜುನ ಸೋಮಲಾಪುರ,  ಬಸವರಾಜ ಪುರದ, ಕಾಶಿನಾಥ ರೆಡ್ಡಿ, ಬಸವರಾಜ ಬಳ್ಳೊಳ್ಳಿ, ಪ್ರಕಾಶ ಚಿನಿವಾಲರ, ಪರಮೇಶ ಕೊಪ್ಪಳ, ಈಶಣ್ಣ ಬಳ್ಳೊಳ್ಳಿ, ಸಿದ್ಲಿಂಗಯ್ಯ ಸ್ವಾಮಿ ಹಿರೇಮಠ, ನೀಲಕಂಟಯ್ಯ ಹಿರೇಮಠ, ಸಂಜಯಕೊತಬಾಳ, ಸಿದ್ದಣ್ಣ ವಾರದ, ಪರಮಾನಂದ ಯಾಳಗಿ, ಸದಾಶಿವಯ್ಯ ಹಿರೇಮಠ, ದತ್ತು ವೈದ್ಯ, ಮಠದ ಸಂಗೀತ ಶಿಕ್ಷಕರಾದ ವಿರೇಶ ಹಿಟ್ನಾಳ್ ಮೊದಲಾದವರು  ಭಾಗವಹಿಸಿದ್ದರು.  ಸಂಸದರ ಅನುದಾನದಿಂದ ಸುಂದರವಾದ ಸಂಗೀತ ವಿದ್ಯಾಪೀಠ ಹಾಗೂ ಸಾಂಸ್ಕೃತಿಕ ಭವನವೊಂದು ಶ್ರೀಗವಿಮಠದ ಆವರಣದಲ್ಲಿ ನಿರ್ಮಾಣವಾಗಿ ಸಂಗೀತ ಮತ್ತು ಸಾಂಸ್ಕೃತಿಕ  ಪ್ರಿಯರ ಮನಸ್ಸು ಸೂರೆಗೊಳ್ಳಲಿದೆ.

Please follow and like us:
error