ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ : ಕಂದಕೂರಗೆ ಪ್ರಶಸ್ತಿ

ಕೊಪ್ಪಳ : ಮೈಸೂರಿನ ಹೆಗ್ಗಡದೇವನಕೋಟೆಯ ಕೋಟೆ ಕಸ್ತೂರಿ ಅಂತರಾಷ್ಟ್ರೀಯ ಫೌಂಡೇಷನ್‌ನ ಸಂಸ್ಥಾಪನ ದಿನದ ಅಂಗವಾಗಿ ಕಸ್ತೂರಿ ಜನನಿ ಸಂಸ್ಥೆ ಈಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳ ನಗರದ ವೃತ್ತಿಪರ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರ ’ಕರುಣಾಜನಕ ಸ್ಥಿತಿ…’ ಎಂಬ ಶೀರ್ಷಿಕೆಯ ಛಾಯಾಚಿತ್ರ ’ಅಭಿನಂದನಾರ್ಹ ಚಿತ್ರ’ ಪ್ರಶಸ್ತಿ ಗಳಿಸಿದೆ.

Leave a Reply