ಗಂಗಾವತಿ :ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ

ಗಂಗಾವತಿ : ಶನಿವಾರ ಕಾಂಗ್ರೆಸ್ ಮುಖಂಡ ದೊಡ್ಡಪ್ಪ ದೇಸಾಯಿಯವರ ಮೇಲೆ 40 ಕ್ಕೂ ಹೆಚ್ಚು ಜನರಿದ್ದ ಗುಂಪೊಂದು ಮಾರಣಾಂತಿಕ ದಾಳಿ ಮಾಡಿದೆ. ಅವರ ಎರಡು ಕಾರುಗಳು ಮತ್ತು ಮನೆ ಜಖಂಗೊಳಗಾಗಿದೆ. ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಶಿವರಾಜ ತಂಗಡಗಿ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದ ದೊಡ್ಡಪ್ಪ ದೇಸಾಯಿ ಕಾಂಗ್ರೆಸ್ ಪಾಳಯಕ್ಕೆ ಹಾರಿದ್ದರು. ಅವರ ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾಗುವಲ್ಲಿ ಅವರ ಪ್ರಭಾವವಿತ್ತು. ವಿರೋಧಿ ಗುಂಪು ಇದನ್ನು ಸಹಿಸಲಾಗದೆ ದಾಳಿ ಮಾಡಿದೆ ಎನ್ನಲಾಗುತ್ತಿದೆ. ದೇಸಾಯಿ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆಪಡೆಯುತ್ತಿದ್ದಾರೆ.ದೂರು ದಾಖಲಿಸಿದ್ದಾರೆ

Related posts

Leave a Comment