ಶಿಕ್ಷಕ ನಾಡಿನ ನಿರ್ಮಾಪಕ – ಜಿ.ಎಸ್.ಗೋನಾಳ

ಕೊಪ್ಪಳ: ಶಿಕ್ಷಣದಿಂದ ಸಮಾಜದ ಬದಲಾವಣೆ ಸಾಧ್ಯ. ಶಿಕ್ಷಕರೇ ನಾಡಿನ ನಿರ್ಮಾಪಕರು ಮಕ್ಕಳನ್ನು ತಿದ್ದಿ ತೀಡಿ ರೂಪ ಕೊಡುವ ಶಿಕ್ಷಕರಿಂದ ಸುಂದರ ಅಭಿವೃದ್ದಿ ಹೊಂದಿದ ನಾಡು ನಿರ್ಮಾಣವಾಗುತ್ತದೆ. ಶಿಕ್ಷಕರದು ವೃತ್ತಿಯಲ್ಲ ಅದು ಸೇವೆ ಎಂದು ಪತ್ರಕರ್ತ ಜಿ.ಎಸ್.ಗೋನಾಳ ಹೇಳಿದರು. ಅವರು ಕಿನ್ನಾಳ ಗ್ರಾಮದ ಸೇವಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಶಿಕ್ಷಣ ಇಲಾಖೆಯ ಅಬ್ದುಲ್ ಬಳಿಗಾರ ಮಕ್ಕಳು ಚಿನ್ನವಿದ್ದಂತೆ ಅದಕ್ಕೆ ಹೊಳಪು ನೀಡುವ ಕೆಲಸ ಮಾಡಬೇಕಾಗಿರುವುದು ಶಿಕ್ಷಕರು. ಆ ಜವಾಬ್ದಾರಿಯನ್ನು ಅವರು ಸರಿಯಾಗಿ ನಿರ್ವಹಿಸಿದಲ್ಲಿ  ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಬಲ್ಲದು ಎಂದು ಹೇಳಿದರು. 
ಇನ್ನೊರ್ವ ಅತಿಥಿ ಮಾಜಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ಸಂಗಮೇಶ ಡಂಬಳ ಸಹ   ಮಕ್ಕಳನ್ನು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಸಂಸ್ಥೆಯ ಅಧ್ಯಕ್ಷರಾದ ರಾಜಾಬಕ್ಷಿ ಎಚ್.ವಿ. ವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಕರಿಗೆ ಸಂಸ್ಥೆಯ ಪರವಾಗಿ ಕಾಣಿಕೆಯನ್ನು ನೀಡಲಾಯಿತು. ಮಕ್ಕಳಿಗೆ ಸಿಹಿಯನ್ನು ವಿತರಿಸಲಾಯಿತು. ವೇದಿಕೆಯ ಮೇಲೆ ಸರ್ವ ಶಿಕ್ಷಕ ವೃಂದ ಉಪಸ್ಥಿತರಿದ್ದರು. 
ಕಾರ್‍ಯಕ್ರಮದ ಸ್ವಾಗತವನ್ನು ಗಾಯತ್ರಿ ಯರಾಶಿ, ನಿರೂಪಣೆ ರವೀಂದ್ರ ಮಾಡಿದರೆ ವಂದನಾರ್ಪಣೆಯನ್ನು ಕಾಮಾಕ್ಷಿ ವಾಲ್ಮೀಕಿ ಮಾಡಿದರು. 
Please follow and like us:
error