ದಿನಾಂಕ ೨೭-೦೧-೨೦೧೪ ರಂದು ಅತಿಥಿ ಉಪನ್ಯಾಸಕರಿಂದ ಬೆಂಗಳೂರ ಚಲೋ

ಕೊಪ್ಪಳ :  ರಾಜ್ಯ ಅತಿಥಿ ಉಪನ್ಯಾಸಕರ ಸಂಘ ಹಾಗೂ ಡಿ.ವಾಯ್.ಎಫ್.ಐ ಬೆಂಬಲದೊಂದಿಗೆ  ದಿ  ೨೭-೦೧-೨೦೧೪ ರಂದು ಬೆಳಿಗ್ಗೆ ೧೧ ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳ ಮನೆ ಎದುರು ಅತಿಥಿ ಉಪನ್ಯಾಸಕರಿಂದ ಅನಿರ್ಧಿಷ್ಠಾವಧಿ ಧರಣಿ ನಡೆಯಲಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ೧೦೬೫೦ ಅತಿಥಿ ಉಪನ್ಯಾಸಕರ ಬೇಡಿಕೆಗಳಾದ ಸೇವಾಭದ್ರತೆ, ಯು.ಜಿ.ಸಿ. ನಿಯಮಾನುಸಾರ ಮಾಸಿಕ ೨೫೦೦೦ ಸಂಭಳ ಹಾಗೂ ಬಹಳಷ್ಟು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾಜೇಷ್ಠತೆ ಆಧಾರದ ಮೇಲೆ ಖಾಯಾಂತಿ ಮೊದಲಾದ ಬೇಡಿಕೆಗಳನ್ನು ಇಟ್ಟುಕೊಂಡು ದಿನಾಂಕ ೨೭-೦೧-೨೦೧೪ ರಂದು ಬೆಳಿಗ್ಗೆ ೧೧ ಗಂಟೆಗೆ ಮುಖ್ಯಮಂತ್ರಿಗಳ ಮನೆ ಎದುರು ಅನಿರ್ಧಿಷ್ಠಾವಧಿ ಧರಣಿ ನಡೆಯಲಿದೆ. ಕಾರಣ ಈ ಧರಣಿಯಲ್ಲಿ ಭಾಗವಹಿಸುವ ಕೊಪ್ಪಳ ಜಿಲ್ಲೆಯ ಅತಿಥಿ ಉಪನ್ಯಾಸಕರಿಗಾಗಿ  ದಿನಾಂಕ ೨೬-೦೧-೨೦೧೪ ರಂದು ಹಂಪಿ ಎಕ್ಷಪ್ರೆಸ್  ರೈಲಿನಲ್ಲಿ ಹೊರಡುವ ವ್ಯವಸ್ಥೆ ಮಾಡಲಾಗಿದೆ. ರೈಲು ಹೊರಡುವ ಮುಂಚಿತವಾಗಿ ಅತಿಥಿ ಉಪನ್ಯಾಸಕರಿಗೆ ಉಚಿತ ಪಾಸುಗಳನ್ನು ನೀಡಲಾಗುತ್ತದೆ. ಕಾರಣ ಅಂದು ಬೇಗನೇ ಸಾಯಂಕಾಲ ೭ ಗಂಟೆಗೆ ರೈಲು ನಿಲ್ದಾಣದಲ್ಲಿ ಸೇರಬೇಕೆಂದು ಕೊಪ್ಪಳ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ವೀರಣ್ಣ ಸಜ್ಜನರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೪೪೯೨೧೦೯೩೮, ೯೭೪೦೦೩೫೫೬೨, ೯೯೦೨೧೩೫೮೧೧ ಸಂಪರ್ಕಿಸಿರಿ.

Leave a Reply