You are here
Home > Koppal News > ವಿಶ್ವದ ಕವಿಗಳಿಗೆ ಮಾದರಿ ರಾಷ್ಟ್ರಕವಿ ಕುವೆಂಪು: ಜಿ. ಎಸ್ ಗೋನಾಳ್

ವಿಶ್ವದ ಕವಿಗಳಿಗೆ ಮಾದರಿ ರಾಷ್ಟ್ರಕವಿ ಕುವೆಂಪು: ಜಿ. ಎಸ್ ಗೋನಾಳ್

 ಕೊಪ್ಪಳ ೨೯:- ರಾಷ್ಟ್ರಕವಿ ಕುವೆಂಪು ವಿಶ್ವದಕವಿಗಳಿಗೆ ಮಾದರಿ. ಇವರ ಕವಿತೆ ಕವನ ಕಾದಂಬರಿಯ ಬರಹವು ವಿಶ್ವದ ಕವಿಗಳಿಗೆ ಮಾದರಿಯಾಗಿವೆ, ಇವರ ವಿಚಾರ ವಿಮರ್ಶದಿಂದ ಸುಮಾರು ಮಂದಿಗೆ ಹೊಸಚೈತನ್ಯ ನೀಡಿದ ಮಹಾನ ವ್ಯಕ್ತಿ. ಮನುಜ ಮತ ವಿಶ್ವ ಪಥ ಎಂದುಸಾರಿದ ಮಹಾನ ಪುರುಷ ಕುವೆಂಪು ಎಂದು ತಿಳಿಸಿ ಅವರ ಜೀವನ ಚರಿತ್ರೆ ಬಗ್ಗೆ ವಿವರವಾಗಿ ಉಪನ್ಯಾಸ ನೀಡಿದರು.
    ಇವರು ಕೊಪ್ಪಳ ನಗರದ ಅಚಿವ್ ಸ್ಪೋಕನ್ ಇಂಗ್ಲೀಷ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನೇಹ ಸಾಂಸ್ಕೃತಿಕ ವೇದಿಕೆ ಕೊಪ್ಪಳ ದಿಂದ ಜರುಗಿದ ಕುವೆಂಪು ರವರ ೧೧೧ನೇ ಜನ್ಮದಿನಾಚರಣೆ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು. 
      ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜ್ಯ ಪತ್ರಿಕರ್ತರ ವೇದಿಕೆಯ ರಾಜ್ಯಾಧ್ಯಕ್ಷರಾದ ಮಹೇಶಬಾಬು ಸುರರ್ವೆ ರವರು ಮಾತನಾಡುತ್ತಾ ರಾಷ್ಟ್ರಕವಿ ಕುವೆಂಪು ರವರ ಆದರ್ಶ ತತ್ವ ಸಿದ್ಧಾಂತಗಳನ್ನು ಇಂದಿನ ಯುವ ಕವಿಗಳು ರೂಡಿಸಿಕೊಳ್ಳಬೆಕು. ವಿಶ್ವಮಾನವ ತತ್ವ ಸಾಧಿಸಿದ ಮಹಾನವ್ಯಕ್ತಿ ಕುವೆಂಪು. ಇವರ ಸಾಧನೆಗೆ ನಾವು ಇಂತಹ ಕಾರ್ಯಕ್ರಮದಿಂದ ನವಕವಿಗಳಿಗೆ ಗುರುತಿಸಿ ಪ್ರೋತ್ಸಾಹಿಸಿವುದರಿಂದ ನಾವು ಅವರಿಗೆ ನೀಡುವ ನಿಜವಾದ ಗೌರವ ಎಂದರು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇಹ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಾ. ಮಾಹಾಂತೇಶ್ ಮಲ್ಲನಗೌಡರ ಅಧ್ಯಕ್ಷತೆವಹಿಸಿ ಕುವೆಂಪು ರವರ ಪ್ರತಿಯೊಂದು ಸಾಹಿತ್ಯ ಒಂದು ವಿಶೇಷ ಅರ್ಥ ನೀಡುತ್ತದೆ. ಅಂತ ಸಾಹಿತ್ಯವನ್ನು ಇಂದಿನ ಯುವ ಪೀಳಿಗೆ ಮೋಬೈಲ್‌ಗಳನ್ನು ಬಿಟ್ಟು ಶಾಲಾ ಕಾಲೇಜಿನ ಅಭ್ಯಾಸದೊಂದಿಗೆ ಸಾಹಿತ್ಯವನ್ನು ಓದಬೇಕು ಅದು iನಸ್ಸಿನ ಮೇಲೆ ಒಳ್ಳೆಯ ಪ್ರಭಾವ ಬಿರುತ್ತದೆ. ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಇನ್ನೊರವ ಅಥಿತಿಗಳಾಗಿ ಕನ್ನಡ ಸಾಹಿತ್ಯ ಪರಿಷತನ ಜಿಲ್ಲಾ ಅಧ್ಯಷರಾದ ವೀರಣ್ಣ ನಿಂಗೋಜಿ ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ನೇಹ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿಯಾದ ರಾಕೇಶ್ ಕಾಂಬ್ಳೇಕರ್, ಸ್ವಾಗತವನ್ನು ಸಂಸ್ಥಯ ಕುಮಾರಿ ಕುಸುಮ ವಂದನಾರ್ಪಣೆಯನ್ನು ಶ್ರೀನಿವಾಸ ಬಳ್ಳಾರಿ ಸ್ವಾಗತ ಗೀತೆಯನ್ನು ಪ್ರೀಯಂಕಾ ಮಾಡಿದರು ಈ ಸ್ಪಧೆಯಲ್ಲಿ ಪ್ರಥಮ ಶ್ರೀಮತಿ ಶಕುಂತಲಾ ಸಜ್ಜನರ ಕುಷ್ಟಗಿ, ದ್ವಿತಿಯ ಕುಮಾರಿ ಶಕುಂತಲಾ ವಾಯ್ ನಾಯಕ್ ಹೊಸಕೇರಾ ಕ್ಯಾಂಪ್ ಗಂಗಾವತಿ, ತೃತೀಯ ಶ್ರೀ ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಘಟ್ಟರಡ್ಡಿಹಾಳ ಕೊಪ್ಪಳ, ಸಮಾಧಾನಕರ ಬಹುಮಾನವನ್ನು ಡಾ. ಕೆ.ಸತ್ಯನಾರಾಯಣರಾವ್ ಕೊಪ್ಪಳ, ಮತ್ತು ವೀರಣ್ಣ ನಿಂಗೋಜಿ ಕರಮುಡಿ ಇವರಿಗೆ ಬಹುಮಾನ ವಿತರಿಸಲಾಯಿತು  

Leave a Reply

Top