ಸೆ.೦೪ ರಂದು ಪ್ರಧಾನ ಮಂತ್ರಿಗಳ ನೇರ ಸಂಭಾಷಣೆ.

ಕೊಪ್ಪಳ, ಸೆ.೦೨ (ಕ ವಾ)  ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಸೆ.೦೪ ರಂದು ಬೆಳಿಗ್ಗೆ ೧೦ ರಿಂದ ೧೧.೪೫ ಗಂಟೆಯವರೆಗೆ ರಾಷ್ಟ್ರಾದ್ಯಂತ ಶಾಲಾ ಮಕ್ಕಳ ಜೊತೆ ನೇರ ಸಂಭಾಷಣೆಯನ್ನು ನಡೆಸಲಿದ್ದಾರೆ.
     ಈ ನೇರಸಂಭಾಷಣೆ ಕಾರ್ಯಕ್ರಮವು ದೂರದರ್ಶನದ ಎಲ್ಲಾ ಚಾನೆಲ್‌ಗಳ ಮೂಲಕ, ಆಕಾಶವಾಣಿಯ ಮೀಡಿಯಂ ತರಂಗಾಂತರ, ಪ್ರಧಾನ ಮಂತ್ರಿಗಳ ಎಂ.ಹೆಚ್.ಆರ್.ಡಿ ವೆಬ್‌ಸೈಟ್ ಹಾಗೂ ಎಂ.ಹೆಚ್.ಆರ್.ಡಿ ಅವರ ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಕಡ್ಡಾಯವಾಗಿ ಎಲ್ಲಾ ಶಾಲೆಯ ಮಕ್ಕಳು ವೀಕ್ಷಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಮಕ್ಕಳು ವೀಕ್ಷಿಸಲು ಅನುಕೂಲವಾಗುವಂತೆ ಅಗತ್ಯ ಟಿ.ವಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ್ ತಿಳಿಸಿದ್ದಾರೆ. 

Related posts

Leave a Comment