ಕನ್ನಡ ಸಾರಸ್ವತ ಲೋಕ ಶ್ರೀಮಂತ ಲೋಕ.

ಭಾಗ್ಯನಗರ-02-  ಯಾವುದೇ ಭಾಷೆಯನ್ನು ಕಲಿತರೂ , ಯಾವುದೇ ಮಾಧ್ಯಮದಲ್ಲಿ ಓದುತ್ತಿದ್ದರೂ ನಮ್ಮ ಮಾತೃಭಾಷೆ ಕನ್ನಡದಲ್ಲಿ ಚೆನ್ನಾಗಿ ಓದಲು, ಬರೆಯಲೂ ಕಲಿತಿರುವುದು ತುಂಬಾ ಅವಶ್ಯ ಎಂದು ಪಯೋನಿಯರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಆರ್. ದತ್ತಾತ್ರೇಯ ಸಾಗರ್ ಅಭಿಪ್ರಾಯಪಟ್ಟರು.
    ಅವರು ಶಾಲೆಯಲ್ಲಿ ನಡೆದ ೬೦ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.  ಕನ್ನಡ ಸಾಹಿತ್ಯ ಶ್ರೀಮಂತವಾದುದು , ಬೇರೆ ಭಾಷೆಗಿಂತ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳು ನಮ್ಮವರು.  ಅಂತಹವರ ಕೃತಿಗಳನ್ನು ತಪ್ಪದೇ ಓದಬೇಕು ಜೊತೆಯಲ್ಲಿ ಕನ್ನಡ ಸಾರಸ್ವತ ಲೋಕದ ಇತರೆ ಕೃತಿಗಳನ್

ನು ಸಹ ಓದಿ  ನಮ್ಮ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದರು.  ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಕನ್ನಡ ನಾಡು ನುಡಿಗಾಗಿ ಮಡಿದ ಮಹಾಪುರುಷರ, ವೀರವನಿತೆಯರ ಛದ್ಮವೇಷದಲ್ಲಿ ಕಂಗೊಳಿಸಿ ರಾಜ್ಯೋತ್ಸವದ ಕುರಿತು ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕಲ್ಪವೃಕ್ಷ ಗ್ರಾಮೀಣಾಭಿವೃದ್ಧಿ ಮತ್ತು ಶೈಕ್ಷಣಿಕ ಸಂಸ್ಥೆಯ ಕಾರ್ಯದರ್ಶಿ ಕೃಷ್ಣ ಎ.ಕಬ್ಬೇರ್, ಉಪಾಧ್ಯಕ್ಷ ಸುರೇಶ್ ಎನ್.ಕಠಾರೆ, ಖಜಾಂಚಿ ಲಕ್ಷಣಸಾ ನಿರಂಜನ್, ನಿರ್ದೇಶಕ ರೇಣುಕಾ ಪ್ರಸಾದ್ ಉಪಸ್ಥಿತರಿದ್ದರು.  ಶಿಕ್ಷಕಿ ಉಷಾ ಪ್ರಾರ್ಥಿಸಿ ಸ್ವಾಗತಿಸಿದರು.  ಶ್ರೀದೇವಿ ನಿರೂಪಿಸಿ ರೀತು ವಂದಿಸಿದರು.

Leave a Reply