You are here
Home > Koppal News > ಸೆ. ೨೯, ರಂಗಯಾನದಿಂದ ನಾವ್ಯಾಕೆ ಹಿಂಗಿದ್ದೀವಿ ನಾಟಕ ಪ್ರಯೋಗ

ಸೆ. ೨೯, ರಂಗಯಾನದಿಂದ ನಾವ್ಯಾಕೆ ಹಿಂಗಿದ್ದೀವಿ ನಾಟಕ ಪ್ರಯೋಗ

ಕೊಪ್ಪಳ, ಸೆ. ೨೬ : ನಗರದ ಸಾಹಿತ್ಯಭವನದಲ್ಲಿ ಸೆ. ೨೯ ರಂದು ಸಂಜೆ ೬.೩೦ಕ್ಕೆ ರಂಗಯಾನ, ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ  ಯಡಹಳ್ಳಿ ಗ್ರಾಮದ ಅನುಸೂಚಿತ ಬುಡಕಟ್ಟು ಯುವಕರಿಂದ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ರಚಿಸಿ ನಿರ್ದೇಶಸಿರುವ ಹೊಸ ಅಲೆಯ ನಾವ್ಯಾಕೆ ಹಿಂಗಿದ್ದೀವಿ  ನಾಟಕ ಪ್ರಯೋಗವನ್ನು ಹಮ್ಮಿಕೊಳ್ಳಲಾಗಿದೆ.
ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಉದ್ಘಾಟಿಸುವರು. ಹಾಲ್ಕುರಿಕೆ ಥಿಯೇಟರ್ ಮಿರರ್ ಮಾಸಿಕ ಪತ್ರಿಕೆಯನ್ನು ಶಾಸಕ ಸಂಗಣ್ಣ ಕರಡಿ ಬಿಡುಗಡೆಗೊಳಿಸುವರು. ಕೋಟೆಯ ಕರ್ನಾಟಕ ಸ್ಥಾನಿಕ ಸಂಪಾದಕ ಹಾಗೂ ರಂಗ ನಿರ್ದೇಶಕ ವೈ. ಬಿ. ಜೂಡಿ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಕ ನಿರ್ದೇಶಕಿ ಶ್ರೀಮತಿ ಸೌಭಾಗ್ಯ, ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಮೇಕಪ್ ಕೃಷ್ಣ, ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ. ಸಯ್ಯದ್, ವಿನೂತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿದ್ಧಲಿಂಯ್ಯ ಹಿರೇಮಠ, ರಾಜಕೀಯ ಸ್ಪೋಟ ಪತ್ರಿಕೆ ಸಂಪಾದಕ ಮಹೇಶಬಾಬು ಸುರ್ವೆ ಹಾಗೂ ಯಡಹಳ್ಳಿ ಸ.ಹಿ.ಪ್ರಾ. ಶಾಲೆ ಮುಖ್ಯೋಪಾದ್ಯಾಯ ವೀರೇಶ ಕಂಬಳಿ ಪಾಲ್ಗೊಳ್ಳುವರು. 
ನಾಟಕ ಉಚಿತ ಪ್ರದರ್ಶನ

Leave a Reply

Top