ಪ.ಪೂ.ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

 : ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವಿವಿಧ ವಿಷಯಗಳಲ್ಲಿ ಖಾಲಿಯಿರುವ ೧೭೬೪ ಹುದ್ದೆಗಳನ್ನು ಅ.೨೦ ರಂದು ವೆಬ್‌ಸೈಟ್  www.schooleducation.kar.nic.in  ರಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.
       ಈ ಹಿಂದೆ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು, ಪರೀಕ್ಷೆಯಲ್ಲಿ ಪಡೆದ ಮೆರಿಟ್ ಹಾಗೂ ಮೀಸಲಾತಿ ಅನುಸರಿಸಿ ೧;೨ ರ ಪ್ರಮಾಣದಲ್ಲಿ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಮೊದಲನೇ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಅ.೨೦ ರಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. 
       ಈ ಪಟ್ಟಿಗೆ ಆಕ್ಷೇಪಣೆಗಳು ಏನಾದರೂ ಇದ್ದಲ್ಲಿ ನಮೂನೆಯಲ್ಲಿ ನೋಂದಣಿ ಅಂಚೆ ಮೂಲಕ ಅಥವಾ ಖುದ್ದಾಗಿ ಸದಸ್ಯ ಕಾರ್ಯದರ್ಶಿ, ವಿಶೇಷ ನೇಮಕಾತಿ ಸಮಿತಿ, ಕೇಂದ್ರಿಯ ದಾಖಲಾತಿ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಸೆಂಟ್ರಲ್ ಜೂನಿಯರ್ ಕಾಲೇಜ್ ಆವರಣ, ಕೆ.ಜಿ.ರಸ್ತೆ, ಬೆಂಗಳೂರು-೫೬೦೦೦೨ ಇವರಿಗೆ ದಿನಾಂಕ: ೨೦-೧೦-೨೦೧೨ ರಿಂದ ೦೩-೧೧-೨೦೧೨ ರೊಳಗಾಗಿ ಸಲ್ಲಿಸುವಂತೆ ಸದಸ್ಯ ಕಾರ್ಯದರ್ಶಿಗಳು ವಿಶೇಷ ನೇಮಕಾತಿ ಸಮಿತಿ ಅವರು ತಿಳಿಸಿದ್ದಾರೆ.
Please follow and like us:
error