ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಶ್ರಮಿಸಿ : ಕೆ.ಎಂ.ಸಯ್ಯದ್

ಕೊಪ್ಪಳ ೨೫ : ರಾಜ್ಯದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಲೆಯಿದ್ದು ಸಂಸ್ಥಾಪಕ ಅಧ್ಯಕ್ಷ ಬಿ.ಶ್ರೀರಾಮುಲು ಅವರ ಜನಪರ ಹೋರಾಟವನ್ನು ಮೆಚ್ಚಿ ಇಂದು ಅನೇಕರು ಬಿಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಪಕ್ಷದ ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ ಪಕ್ಷದ ಬಲವರ್ಧನೆಗೆ ಶ್ರಮಿಸಿ ಎಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ಶನಿವಾರ ದಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೋಂಡು ಮಾತನಾಡುತ್ತಿದ್ದರು ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಬಲಾಡ್ಯಗೊಳ್ಳುತ್ತಿದ್ದು ಬಿ.ಶ್ರೀರಾಮುಲು ರವರ ನಾಯಕತ್ವವನ್ನು ಬೆಂಬಲಿಸಿ ಪಕ್ಷಕ್ಕೆ ಆಗಮಿಸುತ್ತಿದ್ದಾರೆ, ಮುಂಬರುವ ವಿಧಾನ ಸಭಾ ಚುನಾವಣೆಗಳು ಸಮೀಪಿಸುವುದರಿಂದ ಕಾರ್ಯಕರ್ತರು ಸಿದ್ದ ಗೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸಯ್ಯದ್ ಖಾಲೀದ್ ಕೊಪ್ಪಳ ಮಾತನಾಡಿ ಇಂದು ಬಿ.ಶ್ರೀರಾಮುಲುಅವರ ನಾಯಕತ್ವವನ್ನು ಮೆಚ್ಚಿ ಯುವಕರ ದಂಡು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದತ್ತ ಬರುತ್ತಿದೆ ಪಕ್ಷವನ್ನು ಬಲಾಡ್ಯಗೊಳಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ತಾಲೂಕು ಸಂಚಾಲಕರಾದ ಪ್ರಭುಗೌಡ ಪಾಟೀಲ, ಮಹಿಳಾ ಘಟಕದ ಜಿಲ್ಲಾಧಯಕ್ಷೆ ಕುಮಾರಿ ಲಕ್ಷ್ಮೀಪ್ರೀಯಾ, ಮುಖಂಡರಾ ದೇವಪ್ಪ ಮಾಗಳದ, ಶಾಮಿದ ಸಾಬ ಕಿಲ್ಲೇದಾರ, ಸರ್ಫರಾಜ್ ಹ್ಯಾಟಿ, ರಾಮಣ್ಣ ಸಿಂಧೋಗಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Please follow and like us:
error