ಶರಣ ಹುಣ್ಣಿಮೆ ಕಾರ್ಯಕ್ರಮ

ಕೊಪ್ಪಳ: ವಿಶ್ವಗುರು ಬಸವೇಶರ ಚಾರಿಟೇಬಲ್ ಟ್ರಸ್ಟ್ (ರಿ) ಕೊಪ್ಪಳ ಇವರ ವತಿಯಿಂದ ದಿನಾಂಕ ೨೭-೦೧-೨೦೧೩ ರಂದು ಹುಡ್ಕೋ ಕಾಲೋನಿ ಕೊಪ್ಪಳದಲ್ಲಿ ಶರಣ ಹುಣ್ಣಿಮೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಮಂಜುನಾಥ ತಾವರಗೆರಿ, ಬಸವಾಭಿಮಾನಿಗಳು ಕೊಪ್ಪಳ, ವಹಿಸಲಿದ್ದು. ಅತಿಥಿ ಉಪನ್ಯಾಸಕರಾಗಿ ಜಿ.ಎಂ. ರಂಗಪ್ಪ ಮೇದಾರ ಅಧ್ಯಕ್ಷರು ಬಸವಕೇಂದ್ರ, ಮಾನ್ವಿ ವಹಿಸಲಿದ್ದಾರೆ, ಅತಿಥಿಗಳಾಗಿ ಹನಮಂತಪ್ಪ ಬಸನಕಟ್ಟಿ, ಪರುಶುರಾಮ ಮೇದಾರ, ಮಲ್ಲಪ್ಪ ಯಮನಪ್ಪ ಮೇದಾರ, ರಾಮಣ್ಣ ಹೆಚ್. ಮೇದಾರ ಆಗಮಿಸಲಿದ್ದಾರೆ. ಪ್ರಸಾದ ದಾಸೋಹವನ್ನು ಬಸವಯ್ಯ ಸಸಿಮಠ ವಹಿಸಿಕೊಂಡಿದ್ದಾರೆ, 
ಪ್ರತಿ ಹುಣ್ಣಿಮೆಯಂದು ೨ ನೇ ಶತಮಾನದ ಬಸವಾದಿ ಶರಣರ ಸ್ಮರಣೆ ಮಾಡುವ ನಿಮಿತ್ಯ ಶರಣ ಹುಣ್ಣಿಮೆ ಕಾರ್ಯಕ್ರಮವನ್ನು ಆಚರಿಸುತ್ತಲಿದ್ದು. ಕಾರಣ ಎಲ್ಲ ಬಸವಾಭಿಮಾನಿಗಳು ಹಾಗೂ ನಾಗರಿಕರು ತಪ್ಪದೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೆಕಾಗಿ   ಬಸವೇಶ್ವರ ಯುವಕ ಸಂಘದ ಅಧ್ಯಕ್ಷರಾದ ರೇವಣ್ಣ ಬೂತಣ್ಣನವರ ವಿನಂತಿಸಿದ್ದಾರೆ.  
Please follow and like us:
error