ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ವಿಜ್ಞಾನ ಉಪನ್ಯಾಸ

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಿಂದ

ನಮ್ಮ ಸುತ್ತಮುತ್ತಲಿನ ಪಕ್ಷಿ ಸಂಕುಲ ಹಾಗು ಅವುಗಳ ಅಧ್ಯಯನದ ಮಹತ್ವ ಕುರಿತು ಉಪನ್ಯಾಸ ಜರುಗಿತು. ಉಪನ್ಯಾಸಕರಾಗಿ ಧಾರವಾಡದ ಪ್ರಾಧ್ಯಪಕ ಆರ್.ಜಿ. ತಿಮ್ಮಾಪುರ ಮಾತನಾಡಿ ಪಕ್ಷಿಗಳಿಗೆ ಯಾವುದೇ ಸೀಮಾರೇಖೆ ಇಲ್ಲ. ದೇಶದೇಶಗಳ ಸುತ್ತಿ ವಲಸೆ ಹೋಗಿ ಬದುಕುವ ಸ್ವತಂತ್ರ ಪ್ರವೃತ್ತಿ ರೂಢಿಸಿಕೊಂಡಿವೆ. ಅಂತೆಯೇ ನಮ್ಮ ಪರಿಸರದಲ್ಲಿ ಬಗೆ ಬಗೆಯ ಪಕ್ಷಿ ಸಂಕುಲವಿದೆ. ಅಂತಹ ಪಕ್ಷಿಗಳ ಕುರಿತು ಸಂಶೋಧನಾ ಅಧ್ಯಯನ ನಡೆದದ್ದರಿಂದ  ಪಕ್ಷಿಗಳ  ಗುಣ, ವಲಸೆ, ನಡುವಳಿಕೆ, ಬೆಳವಣಿಗೆಗಳನ್ನು ತಿಳಿದುಕೊಂಡಿದ್ದೇವೆ. ಪರಿಸರದ ಸಮತೋಲನೆಯಲ್ಲಿ ಪಕ್ಷಿಗಳ ಪಾತ್ರವು ಪ್ರಮುಖ ಎಂದರು. ಅಧ್ಯಕ್ಷತೆ ಪ್ರಾಚಾರ್ಯ ಎಸ್.ಎಲ್. ಮಾಲಿಪಾಟೀಲ ವಹಿಸಿ  ಇಂತಹ ಉಪನ್ಯಾಸಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕೆಂದರು. ಸಂಸ್ಥೆಯ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಸ್ವಾಗತ ಮತ್ತು ಪ್ರಾಸ್ತಾವಿಕ ಪ್ರೊ.ಮನೋಹರ ದಾದ್ಮಿ, ವಂದನಾರ್ಪಣೆ ಪ್ರೊ.ಪ್ರತಾಪ್‌ಬಾಬುರಾವ್ ನೆರವೇರಿಸಿದರೆಂದು ಉಪನ್ಯಾಸಕ ಡಾ.ಪ್ರಕಾಶಬಳ್ಳಾರಿ ತಿಳಿಸಿದ್ದಾರೆ.

Please follow and like us:
error