ಕುಣಿಕೇರಿಯಲ್ಲಿ ಗುರು ಶಿಷ್ಯರ ಸಮಾಗಮ ಸಮಾರಂಭ ಯಶಸ್ವಿ.

ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ಅಲ್ಲಮಪ್ರಭು ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ೦೯ರಂದು ಗುರು ಶಿಷ್ಯರ ಸಮಾಗಮ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಬಿ.ಎಸ್.ಪಾಟೀಲರು ಮಾತನಾಡುತ್ತಾ ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿ ಪವಿತ್ರವಾದದ್ದು, ಅಂತಹ ತರಬೇತಿಯನ್ನು ನಮ್ಮ ಸಂಸ್ಥೆಯಲ್ಲಿ ಪಡೆದು ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ನೀವು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಶ್ರೀ ಸಿ.ವಿ.ಜಡಿಯವರ ನಿವೃತ್ತ ಪ್ರಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಐದು ವರ್ಷಗಳ ನಂತರ ಎಲ್ಲಾ ಗುರು ಶಿಷ್ಯರು ಒಂದೆಡೆ ಸೇರಿರುವುದು ಅದ್ಭುತವೇ ಸರಿ ಶಿಕ್ಷಕರಾದವರು ವಾಚನ, ಗಾಯನ, ಮಾತುಗಾರಿಕೆ ಕರಗತ ಮಾಡಿಕೊಳ್ಳಬೇಕು. ಅಂದಾಗ ಗುರು ಸ್ಥಾನಕ್ಕೆ ಗೌರವ ಕೊಟ್ಟಂತಾಗುತ್ತದೆ ಕಾರ್ಯಕ್ರಮದ ಆಚರಣೆ ಸಾರ್ಥಕ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ  ವಿ.ಎಸ್.ಹಿರೇಮಠ, ಶ್ರೀಮತಿ ಗೀತಾ ನಾಯಕ, ಶ್ರೀಮತಿ ಮಂಗಳಾ ಶಿವರಡ್ಡಿ, ರಾಜು ಕೊಪ್ಪಳ, ವಾಯ್.ಬಿ.ಬೆನ್ನಾಮಟ್ಟಿ, ಪರಿಮಳ ಮುರಡಿ, ಡಿ.ಎಚ್.ನದಾಫ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿ ವಿಠ್ಠಲ್ ಶಿರೂರು ರಚಿಸಿದ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಇತಿಹಾಸ ವಿಷಯದ ಕೈಪಿಡಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಇದೇ ಸಂಸ್ಥೆಯಲ್ಲಿ
ಓದಿ ಪೊಲೀಸ ಇಲಾಖೆಗೆ ನೇಮಕವಾದ ಸಂಗಪ್ಪ ಹುಚನೂರ, ಮಂಜುನಾಥ ಕುಂಬಾರರನ್ನು
ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಧ್ಯಕ್ಷರು ಹಾಗೂ ಉದ್ಘಾಟಕರನ್ನು
ಸನ್ಮಾನಿಸಲಾಯಿತು.
    ಹಳೆಯ ವಿದ್ಯಾರ್ಥಿ ಫಕೀರಪ್ಪ ಎನ್.ಅಜ್ಜಿ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಮೇಶ ಡಂಬ್ರಳ್ಳಿ, ಈಶಪ್ಪ ಸೊಂಪೂರ, ಈರಮ್ಮ ಸೊಂಪೂರ, ಸಂತೋಷ ಡಂಬ್ರಳ್ಳಿ, ಲಕ್ಷ್ಮಣ ಕೆಳಗಡೆ, ಅಂಬಿಕಾ ಮುಕ್ಕುಂದಿ, ಎಮ್.ಎಮ್.ಸುಂಕದ, ಭೂ ದಾನಿ ಹುಚ್ಚಮ್ಮ ಚೌದ್ರಿ ಸ.ಹಿ.ಪ್ರಾ ಶಾಲೆ ಕುಣಿಕೇರಿಯ ಮುಖ್ಯೋಪಾಧ್ಯಾಯರಾದ ವಿರೇಶ ಅರಳಿಕಟ್ಟಿ, ಕೆ.ರಾಜಾಸಾಬ, ಬಸವರಾಜ ಸಬರದ್, ಮಾರುತಿ ಪೂಜಾರ, ಕೊಟ್ರಯ್ಯ ಗುಡ್ಲಾನೂರ, ರವಿ ಶಹಾಪೂರ, ಉಮೇಶ ಗಣಪ ಇತರರು ಉಪಸ್ಥಿತರಿದ್ದರು. ಪುಷ್ಪಾವತಿ ಮೂಲಿಮನಿ ಹಾಗೂ ವಿಠ್ಠಲ ಶಿರೂರು ನಿರೂಪಿಸಿದರು. ಕೃಷ್ಣ ಮೂರ್ತಿ ಹಲಗೇರಿ, ನೇತ್ರಾವತಿ ಬಳ್ಳಾರಿ ಸ್ವಾಗತ ಹಾಗೂ ಪುಷ್ಪಾರ್ಪಣೆ ನೆರವೆರಿಸಿದರು. ಕೊನೆಯಲ್ಲಿ ಕನಕಪ್ಪ ವಾಲಿಕಾರ ವಂದಿಸಿದರು.

Please follow and like us:
error