fbpx

ದುಷ್ಕರ್ಮಿಗಳನ್ನು ಬಂಧಿಸಿ ಕಾನೂನುಕ್ರಮ ಜರುಗಿಸಲು ಆಗ್ರಹ

ಕೊಪ್ಪಳ ಜಿಲ್ಲೆಯ ಕನಕಗಿರಿ ಸಮೀಪದ ಜೀರಾಳ ಗ್ರಾಮದ ವಾಲ್ಮೀಕಿ ವೃತ್ತದಲ್ಲಿಯ ಮದಕರಿ ನಾಯಕರ ನಾಮಫಲಕಕ್ಕೆ ಚಪ್ಪಲಿಹಾರ ಹಾಕಿ ಅವಮಾನಿಸಿದ್ದು, ಅಕ್ಷಮ್ಯ ಅಪರಾದವಾಗಿದ್ದು, ಇದು ಮಾನವ ಸಮಾಜ ತಲೆತಗ್ಗಿಸುವ ಕೃತ್ಯವಾಗಿದೆ.                          ಕೇವಲ ನಾಯಕ ಸಮಾಜಕ್ಕೆ ಅಷ್ಟೆ ಅಲ್ಲದೆ ಇಡಿ ಮಾನವ ಕುಲದ ಸನ್ಮಾರ್ಗಕ್ಕಾಗಿ ರಾಮಾಯಣ ಮಹಾಗ್ರಂಥ ಬರೆದಂತಹ ಆದಿಕವಿ ಮಹರ್ಷಿ ವಾಲ್ಮೀಕಿ ಹಾಗೂ ಕೇವಲ ನಾಯಕ ಸಮಾಜದ ಒಳತನ್ನಷ್ಟೆ ಬಯಸದೆ ಎಲ್ಲಾ ಸಮುದಾಯದ ಪ್ರಜೆಗಳನ್ನು ಸಮಾನರಂತೆ ಕಂಡು ಆಡಳಿತ ನಡೆಸಿದ ರಾಜಾವೀರ ಮದಕರಿ ನಾಯಕರಿಗೆ ಅವಮಾನಿಸಿದ್ದು, ಎಲ್ಲಾ ಸಮಾಜದ ಜನಾಂಗಕ್ಕೆ ಅವಮಾನಿಸಿದಂತಾಗಿದೆ. ಕಾರಣ, ಕೂಡಲೇ ಈ ಕೃತ್ಯ ಎಸಗಿದಂತಹ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನುಕ್ರಮ ಜರುಗಿಸಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. 
                   ಹಾಗೇ ಜೀರಾಳ ಗ್ರಾಮ ಘಟಕದ ಅಧ್ಯಕ್ಷರಾದ ಲಿಂಗಪ್ಪ ನಾಯಕರವರ ದೂರಿನಂತೆ ದುಷ್ಕರ್ಮಿಗಳನ್ನು ಒಂದು ವಾರದೊಳಗಾಗಿ ಬಂಧಿಸದಿದ್ದಲ್ಲಿ ಕರ್ನಾಟಕ ಮದಕರಿ ನಾಯಕ ಸೇನೆ ರಾಜ್ಯಾಧ್ಯಕ್ಷರಾದ ಶಿಂಗಾಪೂರ ವೆಂಕಟೇಶ ರವರ ನೇತೃತ್ವ ಹಾಗೂ ಸಮಾಜದ ಗುರುಗಳಾದ ವಾಲ್ಮೀಕಿ ಗುರುಪೀಠ ರಾಜನಹಳ್ಳಿಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ಹಾಗೂ ಶಿರಾ ತಾಲೂಕು ಶಿಡ್ಲಕೋಣದ ಶ್ರೀ ವಾಲ್ಮೀಕಿ ಗುರುಪೀಠದ ಸಂಜಯಕುಮಾರ ಸ್ವಾಮೀಜಿ ಹಾಗೂ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದ ವಾಲ್ಮೀಕಿ ಗುರುಕುಲಾಶ್ರಮದ ಸ್ವಾಮೀಜಿಗಳಾದ ಶ್ರೀ ಅಪ್ಪಯ್ಯಸ್ವಾಮೀಜಿಗಳ ಸಾನಿಧ್ಯ ಹಾಗೂ ಸಮಾಜದ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಸಾಂಕೇತಿಕ ಧರಣಿ ಕೈಗೊಳ್ಳಲಾಗುವದೆಂದು  ಲಕ್ಷ್ಮಣ ತಳವಾರ  ಜಿಲ್ಲಾಧ್ಯಕ್ಷರು-ಕೊಪ್ಪಳ ಜಿಲ್ಲೆ  ತಿಳಿಸಿದ್ದಾರೆ.  
Please follow and like us:
error

Leave a Reply

error: Content is protected !!