You are here
Home > Koppal News > ಮಾಹಿತಿ ಹಕ್ಕು ಅಧಿನಿಯಮದ ಕುರಿತು ವಿಶೇಷ ಉಪನ್ಯಾಸ

ಮಾಹಿತಿ ಹಕ್ಕು ಅಧಿನಿಯಮದ ಕುರಿತು ವಿಶೇಷ ಉಪನ್ಯಾಸ

     ೨೦೧೧೩-೧೪ ರ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿನ ದಿನಾಂಕ ೨೫-೦೪-೨೦೧೪ ರ ವಿಶೇಷ ಉಪನ್ಯಾಸ
      ನಗರದ ಶ್ರೀ ಗವಿಸಿದ್ದೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ೨೦೧೧೩-೧೪ ರ ಸಾಲಿನ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉಪನ್ಯಾಸ ಕಾರ‍್ಯಕ್ರಮದಲ್ಲಿ ದಿನಾಂಕ ೨೫-೦೪-೨೦೧೪ ರಂದು 
  ಹನಮಂತರಾವ ವಕೀಲರು ಕೊಪ್ಪಳ ಆಗಮಿಸಿ ಮಾಹಿತಿ ಹಕ್ಕು ಅಧಿನಿಯಮದ ಕುರಿತು ವಿಶೇಷ ಉಪನ್ಯಾಸಗೈದರು.
ತಮ್ಮ ಉಪನ್ಯಾಸದಲ್ಲಿ ಭಾರತದಲ್ಲಿರುವ ಹಲವಾರು ಕಾನೂನುಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಮಹತ್ತರವಾದ ಕಾಯದೆಯಾಗಿದೆ ನಾಗರಿಕರಿಗೆ ಸರ್ಕಾರದ ಚಟುವಟಿಕೆಗಳ ಕುರಿತು ಮಾಹಿತಿ ಪಡೆಯುವ ಹಕ್ಕು ಇರುತ್ತದೆ, ಮಾಹಿತಿ ಹಕ್ಕು ಕಾಯದೆ ಬಂದ ನಂತರ ಹಲವಾರು ಅವ್ಯವಹಾರಗಳು ಬೆಳಕಿಗೆ ಬಂದಿದ್ದು ಮಾಹಿತಿ ಹಕ್ಕು ಕಾಯದೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆ ಹೊರತು ದುರುಪಯೋಗಪಡಿಸಿಕೋಳ್ಳಬಾರದು ಎಂದರು ಮಹಿಳೆಯರ ಹಕ್ಕು ಬಾದ್ಯತೆಗಳನ್ನು ಸಂರಕ್ಷಿಸಲು ಭಾರತದಲ್ಲಿ ಹಲವಾರು ಕಾಯದೆಗಳಿದ್ದು ಮಹಿಳೆಯರು ಕಾಯ್ದೆ ಕುರಿತು ತಿಳುವಳಿಕೆ ಪಡೆದು ತಮ್ಮ ಸವಲತ್ತು ಪಡೆದುಕೊಳ್ಳಬೇಕೆಂದರು      ಕಾರ‍್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಡಾ.ಜೆ.ಎಸ್.ಪಾಟೀಲ್‌ರವರು ಮಾಹಿತಿ ಹಕ್ಕು ಕಾಯದೆ ನಾಗರಿಕ ಕಾಯದೆಗಳಲ್ಲಿಯೇ ಪರಿಣಾಮಕಾರಿಯಾದ ಕಾಯ್ದೆಯಾಗಿದೆ, ಸರ್ಕಾರದಿಂದ ಮಾಹಿತಿ ಪಡೆಯುವ ವಿಧಿ ವಿಧಾನಗಳನ್ನು ವಿವರಿಸಿದರು, 
ಪ್ರಾಸ್ತಾವಿಕವಾಗಿ ಪ್ರೊ.ಶರಣಬಸಪ್ಪ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾರದರ್ಶಕ ಹಾಗೂ ಪ್ರಾಮಾಣಿಕ ಆಡಳಿತ ನೀಡಬೇಕಾಗಿರುವುದು ಸರ್ಕಾರ ಕರ್ತವ್ಯವಾಗಿರುವುದರಿಂದ ಈ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯದೆ ಜಾರಿ ಮಾಡುವ ಮೂಲಕ ಸರ್ಕಾರ ಜನತೆಗೆ ಮಹತ್ತರ ಸೇವೆ ಒದಗಿಸುತ್ತದೆ ಎಂದರು      ಕಾರ‍್ಯಕ್ರಮವನ್ನು ವಿದ್ಯಾರ್ಥಿ ವಿರುಪಾಕ್ಷಪ್ಪ ನಿರೂಪಿಸಿದರೆ ವಂದನಾರ್ಪಣೆ ಮಂಜುನಾಥ ನಿರ್ವಹಿಸಿದರು 

Leave a Reply

Top