ಆ.೨೭ ರಂದು ಕೊಪ್ಪಳ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ

  ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಕೊಪ್ಪಳ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಆ.೨೭ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೯.೩೦ ಗಂಟೆಗೆ ಜರುಗಿಸಲಾಗುವುದು ಎಂದು ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಎನ್.ಎಸ್.ಪಾಟೀಲ್ ತಿಳಿಸಿದ್ದಾರೆ.
  ಕ್ರೀಡಾಕೂಟದಲ್ಲಿ ಪುರುಷರಿಗೆ ಅಥ್ಲೆಟಿಕ್ಸ್ (೧೦೦ ಮೀ, ೨೦೦, ೪೦೦, ೮೦೦, ೧೫೦೦ ಹಾಗೂ ೫೦೦೦ ಮೀ ಓಟ), ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಭಲ್ಲೆ ಎಸೆತ, ೪*೧೦೦ ರಿಲೇ, ೪*೪೦೦ ರಿಲೇ, ವ್ಹಾಲಿಬಾಲ್, ಕಬ್ಬಡ್ಡಿ, ಖೋ ಖೋ ಹಾಗೂ ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು.  ಅದೇ ರೀತಿ ಮಹಿಳೆಯರಿಗೆ ಅಥ್ಲೆಟಿಕ್ಸ್ (೧೦೦ ಮೀ, ೨೦೦, ೪೦೦, ೮೦೦, ೧೫೦೦ ಹಾಗೂ ೩೦೦೦ ಮೀ ಓಟ), ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಭಲ್ಲೆ ಎಸೆತ, ೪*೧೦೦ ರಿಲೇ, ೪*೪೦೦ ರಿಲೇ, ವ್ಹಾಲಿಬಾಲ್, ಕಬ್ಬಡ್ಡಿ, ಖೋ ಖೋ ಹಾಗೂ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಮತ್ತು ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಲು ಆರ್ಹರಿರುತ್ತಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಲಿಚ್ಚಿಸುವ ಕ್ರೀಡಾಪಟುಗಳು ಆ.೨೫ ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ ಹಾಗೂ ಊಟದ ವ್ಯವಸ್ಥೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ  ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಎನ್.ಎಸ್.ಪಾಟೀಲ್-೯೯೮೦೮೫೨೭೩೫ ಗೆ ಹಾಗೂ ಸಿ.ಎ.ಪಾಟೀಲ್-೯೩೪೨೩೮೭೯೩೫ ಇವರನ್ನು ಸಂಪರ್ಕಿಸಬಹುದು .
Please follow and like us:
error