ಸಾಯಿ ಬುಡೋಕಾನ್ ಕರಾಟೆನಲ್ಲಿ ಬೆಲ್ಟ್ ಪರೀಕ್ಷೆ

 ದಿ  ೦೭  ರವಿವಾರದಂದು ನಗರದ ಜಿ.ಜಿ.ಎಮ್.ಎಸ್ ಶಾಲೆ ಆವರಣದಲ್ಲಿ ಶ್ರೀಸಾಯಿ ಅಭಿವೃದ್ಧಿ ಹಾಗೂ ಶಿಕ್ಷಣ ಸಂಘ (ರಿ) ಕೊಪ್ಪಳ ಇವರ ಆಶ್ರಯದಲ್ಲಿ ಸಾಯಿ ಬುಡೋಕಾನ್ ಕರಾಟೆ ಕ್ಲಬ್ ಆಯೋಜಿಸಿದ ಕರಾಟೆ ಬೆಲ್ಟ್ ಪರೀಕ್ಷೆಯಲ್ಲಿ ನಗರದಿಂದ ೧೯ ಕರಾಟೆ ಪಟುಗಳು ಪರೀಕ್ಷೆಯಲ್ಲಿ ಭಾಗವಹಿಸಿ ತೇರ್ಗಡೆಯಾಗಿದ್ದಾರೆ. ಈ ಕರಾಟೆ ಪರೀಕ್ಷೆಯನ್ನು ಅಂತರಾಷ್ಟ್ರೀಯ ಕರಾಟೆ ಪಟು   ಮೌನೇಶ.ಎಸ್.ವಿ ನೇತೃತ್ವದಲ್ಲಿ ಜರುಗಿತು. ಈ ಪರೀಕ್ಷೆಯನ್ನು ಬೆಳಿಗ್ಗೆ ೬ ರಿಂದ ೧೧ ಗಂಟೆಯವರೆಗೆ ಸಹ ಪರೀಕ್ಷಕ ಹಾಗೂ ಸಂಘದ ಕಾರ್ಯದರ್ಶಿಯಾದ ಶ್ರೀಕಾಂತ ಪಿ.ಕಲಾಲ ಹಾಗೂ ತರಬೇತುದಾರ ಚಿರಂಜೀವಿ.ಎಮ್.ಗಿಣಗೇರಿ, ಸಹಕಾರದೊಂದಿಗೆ ಪರೀಕ್ಷೆ ನಡೆಯಿತು ಆ ನಂತರ ಕರಾಟೆ ಪಟುಗಳಿಗೆ ಬೆ

ಲ್ಟ್ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತೆಂದು ಸಂಘದ ಸದಸ್ಯರಾದ ಫಯಾಜಪಾಶಾ ಎಂ.ಯತ್ನಟ್ಟಿ ತಿಳಿಸಿದರು.

ತೇರ್ಗಡೆಯಾದ ಕರಾಟೆಪಟುಗಳು ಮುತ್ತುರಾಜ್ ಬಂಡಿ, ರುಕ್ಮಿಣಿ ಡಿ.ಬಂಗಾಳಿಗಿಡ, ಅಭಿಶೇಖ್ ಆರ್.ಡಿ, ಶೃತಿ ಎಮ್ ಕೊಂಡನಹಳ್ಳಿ, ಮೋಹಿತ್ ಎಲ್.ಮೆಹತಾ, ಸವಿತಾ, ಚಂದ್ರು, ಯಮನೂರ, ಕೃಷ್ಣ, ಅಲ್ತಾಫ್, ಅರ್ಜುನ್, ಅಭಿಶೇಖ, ಮಂಜುನಾಥ, ಅನೀಲಕುಮಾರ, ಸುನೀಲಕುಮಾರ, ಅನಂತಕುಮಾರ, ಮಂಜುಳಾ ಎಮ್.ಮುಂಡರಗಿ, ಸಂಜನಾ ಆರ್.ಓಲೇಕಾರ. ಸ್ವಾತಿ ಆರ್.ಓಲೇಕಾರ.

Leave a Reply