ಚಿಗುರದ ಬಣ್ಣಗಳು ನಾಟಕ – ದಲಿತ ಬದುಕಿನ ಮಕ್ಕಳ ಕಥೆ ಅನಾವರಣ

 ದಿ : ೨೪-೧೦-೨೦೧೪ ರಂದು ದಲಿತ ಬದುಕಿನ ಮಕ್ಕಳ ಕಥೆ ಅನಾವರಣ
ಚಿಗುರದ ಬಣ್ಣಗಳು’
ಇದೊಂದು ದಲಿತ ಬದುಕಿನ ಮಕ್ಕಳ ಕಥಾನಕ
ಅಭಿನಯ- ವಿಸ್ತಾರ್ ಭಾಂದವಿ ಮಕ್ಕಳು
ರಚನೆ ಮತ್ತು ನಿದೇ೵ಶನ – ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್
ದಿನಾಂಕ 24-10-2014 ಸಾಹಿತ್ಯ ಭವನ ಕೊಪ್ಪಳ ಸಂಜೆ 6ಕ್ಕೆ

ಚಿಗುರದ ಬಣ್ಣಗಳು ನಾಟಕ ಪರಿಚಯ :
ಚಿಗುರದ ಬಣ್ಣಗಳು ನಾಟಕ ಭಾರತದ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತಾ ದಲಿತ ಬದುಕಿನ ಮಕ್ಕಳ ಕತೆಯನ್ನು ಕೇಂದ್ರವಾಗಿಸಿಕೊಂಡು ದಲಿತ ಮಕ್ಕಳು ಅನುಭವಿಸುತ್ತಿರುವ ಅವಮಾನ, ಅಸ್ಪೃಶ್ಯತೆ, ಅಸಮಾನತೆಗಳನ್ನು ರಂಗದ ಮೇಲೆ ಅನಾವರಣಗೊಳ್ಳುತ್ತ ಹೋಗುತ್ತದೆ. ಸ್ವಾತಂತ್ರ್ಯ ಭಾರತದಲ್ಲಿ ಸಂವಿಧಾನದ ಆಶಯಗಳನ್ನು ಒಪ್ಪಿ ಬದುಕುತ್ತಿರುವ ಇಲ್ಲಿನ ಮನುಷ್ಯರ ದಿನಚರಿಯಲ್ಲಿನ ಆಚರಣೆಗಳು, ಸಂಪ್ರಾದಾಯಗಳು, ರೂಢಿಗತ ನಿಯಮಗಳು ದಲಿತರ ಮೇಲೆ ಕ್ರೂರ ಸಾಮಾಗ್ರಿಗಳಾಗಿ ಚುಚ್ಚುತ್ತವೆ. ಅದರಿಂದ ಏಳಲಾಗದೆ ಕಮರುತ್ತಿರುವ ದಲಿತ ಮಕ್ಕಳ ವೇದನೆಯೇ ಚಿಗುರದ ಬಣ್ಣಗಳ ನಾಟಕ ಕಥಾಹಂದರವೂ ಆಗಿದೆ. ಅನ್ನದ ಬಿಂಬಗಳಲ್ಲಿ ಹಸಿವನ ನರ್ತನ  ಬೆವರಿನ ಹನಿಗಳಲ್ಲಿ ಗುಲಾಮ ಹಿರಿಯ ಸಂತಾನ.  ದಲಿತರ ಮನೆಮುಂದೆ ಹಸಿವು ಹೇಗೆ ಮಲಗಿದೆ ನೋಡು ಎಂಬ ಪ್ರತಿಯ ಕಾವ್ಯ ರೂಪದಲ್ಲಿ ರಂಗದ ಮೇಲೆ ಅರಳುವ ದೃಶ್ಯಗಳು ಪರಸ್ಪರ ಪ್ರೀತಿಸುವ ಮನುಷ್ಯ ಗುಣವನ್ನು ನಾಟಕ ಪ್ರಚೋದಿಸುತ್ತದೆ. ದಿ  ೨೪-೧೦-೨೦೧೪ರಂದು ಸಾಹಿತ್ಯ ಭವನ ಕೊಪ್ಪಳದಲ್ಲಿ ಸಂಜೆ ೬ಕ್ಕೆ ವಿಶಿಷ್ಠ ನಾಟಕ ಪ್ರದರ್ಶನವನ್ನು ಆಯೋಜಿಸಿದೆ. ಇದರ ರಚನೆ ಮತ್ತು ನಿರ್ದೇಶನ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ.
Please follow and like us:
error