ಶ್ರೀ ಭಗವಾನ ಮಹಾವೀರ ರವರ ಜಯಂತೋತ್ಸವ ಕಾರ್ಯಕ್ರಮ

 ಕೊಪ್ಪಳ: ನಗರದಲ್ಲಿ ಇದೇ ದಿನಾಂಕ ೦೨-೦೪-೨೦೧೫ ಗುರುವಾರ ಭಗವಾನ ಮಹಾವೀರ ಜಯಂತಿ ನಿಮಿತ್ಯ ಬೆಳಿಗ್ಗೆ ೮:೦೦ ಘಟೆಗೆ ಕೊಪ್ಪಳ ನಗರದ ಸಾಹಿತ್ಯ ಭವನದಿಂದ ಜವಾಹರ ರಸ್ತೆ ಗಡಿಯಾರ ಕಂಬದ ಮಾರ್ಗವಾಗಿ ಕೋಟೆ ಏರಿಯಾದಲ್ಲಿರುವ ಶ್ರೀ ಪಾರ್ಶ್ವನಾಥ ಜೈನ ಬಸದಿಗೆ ಮೆರವಣಿಗೆಯಲ್ಲಿ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಗವಿಮಠ ರಸ್ತೆಯಲ್ಲಿರುವ ಸ್ಥಾನಕ ಭವನದಲ್ಲಿ ಸಾಂಸತಿಕ ಕಾರ್ಯಕ್ರಮಗಳು ಬೆಳಿಗ್ಗೆ ೧೧:೦೦ ಘಂಟೆಯಿಂದ ಜರುಗಲಿವೆ. 
ಸದರಿ ಕಾರ್ಯಕ್ರಮದಲ್ಲಿ ತಾವುಗಳು ಪಾಲ್ಗೊಳ್ಳಲು ಹಾಗೂ ಕಾರ್ಯಕ್ರಮದ ವರದಿ ಮಾಡಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. 

Related posts

Leave a Comment