ದಲಿತ ಸಾಹಿತ್ಯ ಕೃತಿಗಳಿಗೆ ಅಮೃತಮಹೋತ್ಸವ ಸವಿ ನೆನಪು ದತ್ತಿನಿಧಿ

ಸ್ಪರ್ಧೆ
 ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಎಲ್ ಬಸವರಾಜು ಅವರು ಸ್ಥಾಪಿಸಿರುವ ಅಮೃತ ಮಹೋತ್ಸವ ಸವಿ ನೆನಪು ದತ್ತಿ ನಿಧಿಯಲ್ಲಿ ಉತ್ತಮ ದಲಿತ ಸಾಹಿತ್ಯ ಕೃತಿಗೆ ರೂ. ೫೦೦೦ ನಗದು ಬಹುಮಾನ ಮತ್ತು ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ.
  ೨೦೧೧ನೇ ಸಾಲಿನ ಯಾವುದೇ ಪ್ರಕಾರದ ಪ್ರಕಟವಾದ ಉತ್ತಮ ದಲಿತ ಸಾಹಿತ್ಯ ಕೃತಿಯನ್ನು ಸ್ಪರ್ಧೆಗೆ ಕಳುಹಿಸಬಹುದು. ಪ್ರತಿ ಪ್ರವೇಶಕ್ಕೆ ಮೂರು ಪುಸ್ತಕಗಳನ್ನು ಕಳುಹಿಸಬೇಕು.  ಈ ರೀತಿ ಕಳುಹಿಸಲಾದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ.  ಸ್ಪರ್ಧೆಗೆ ಪುಸ್ತಕಗಳನ್ನು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-೧೮ ಇವರಿಗೆ ಜುಲೈ ೦೫ ರ ಒಳಗಾಗಿ ಕಳುಹಿಸಿಕೊಡಬೇಕು.  ಹೆಚ್ಚಿನ ವಿವರಗಳಿಗೆ ದೂರವಾಣಿ ಸಂ: ೦೮೦-೨೬೬೨೩೫೮೪ ಕ್ಕೆ ಸಂಪರ್ಕಿಸಬಹುದಾಗಿದೆ  
Please follow and like us:
error