fbpx

ದೇವದಾಸಿ ಪದ್ದತಿ ನಿರ್ಮೂಲನೆ ಕುರಿತು ಉಪನ್ಯಾಸ

ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ಭಯ ಸಮಿತಿ ವತಿಯಿಂದ ದೇವದಾಸಿ ಪದ್ದತಿ ನಿರ್ಮೂಲನೆ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕನಕಗಿರಿಯ ಗಜಲ್ ಕವಿ ಅಲ್ಲಾಗಿರಿರಾಜ ಮಾತನಾಡಿ ದೇವದಾಸಿ ಪದ್ದತಿ ಸಮಾಜದ ಅನಿಷ್ಠ ಪದ್ದತಿಯಾಗಿದ್ದು ಇದನ್ನು ಇಲ್ಲದಾಗಿಸಲು ಸರ್ಕಾರವು ಹತ್ತು ಹಲವು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮಾಡುತ್ತಲಿದೆ. ನಾಡಿನ ಪ್ರಗತಿಪರ ಮಠಾಧೀಶರು, ಬುದ್ಧಿ ಜೀವಿಗಳು, ಸಾಹಿತಿಗಳು, ಹೋರಾಟಗಾರರು ಸಹ ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕವಾಗಿ ಜನರು ಸಹ ಕೈಜೋಡಿಸಿದಾಗ ಮಾತ್ರ ಈ ಪದ್ದತಿ ನಿರ್ಮೂಲನೆಯಾಗಬಲ್ಲದು. ಜೊತೆಗೆ ಪ್ರತಿಯೋರ್ವರು ಶಿಕ್ಷಣ ಪಡೆದಾಗ ಮಾತ್ರ ಇಂತಹ ಅನಿಷ್ಠ ಪದ್ದತಿ ನಿರ್ಮೂಲನೆ ಯಾಗುತ್ತದೆಂದರು. ತಾವರಗೇರಿ ಸಮೂಹ ಸಂಸ್ಥೆಯ ಗಂಗಮ್ಮ ದೇವರಮನಿ ಸಹ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದರು ಅಧ್ಯಕ್ಷತೆ ವಹಿಸಿ ಪ್ರೊ.ತಿಮ್ಮರೆಡ್ಡಿ ಮೇಟಿ ಮಾತನಾಡಿ ದೇವರು ಹಾಗೂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಈ ಶೋಷಣೆಯನ್ನು ಹತ್ತಿಕ್ಕಲು  ಎಲ್ಲಾ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಒಕ್ಕೊರಲಿನಿಂದ ಸಂಘಟಿತರಾಗಿ ಸಮಾಜದಲ್ಲಿ  ಜಾಗೃತಿ ಮೂಡಿಸುವದರ ಮೂಲಕ ಈ ಪದ್ದತಿಯನ್ನು  ನಿರ್ಮೂಲನೆ ಗೊಳಿಸಲು ಕರೆ ನೀಡಿದರು.  ವೇದಿಕೆಯಲ್ಲಿ ನಿರ್ಭಯ ಸಮಿತಿ ಪ್ರಾಧ್ಯಾಪಕಿ ಶುಭಾ ಉಪಸ್ಥಿತರಿದ್ದರು. ಸ್ವಾಗತ ಪ್ರಾಧ್ಯಾಪಕಿ ನಂದಾ, ವಂದನಾರ್ಪಣೆ ಅತಿಥಿ ಉಪನ್ಯಾಸಕಿ ಪುನೀತಾ ನಿರೂಪಣೆ ಪ್ರಾಧ್ಯಾಪಕಿ ಗಾಯತ್ರಿ ಭಾವಿಕಟ್ಟಿ ನೆರವೇರಿಸಿದರು. ಕಾಲೇಜಿನ ಸಕಲ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. 
Please follow and like us:
error

Leave a Reply

error: Content is protected !!