ಇಂದಿರಾ ಪ್ರಿಯದರ್ಶಿನಿ ವಿಶ್ವಕಂಡ ಧೀಮಂತ ನಾಯಕಿ- ಕೆ. ಬಸವರಾಜ ಹಿಟ್ನಾಳ

  ನಗರದ ಜಿಲ್ಲಾ ಕಾಂಗ್ರೇಸ ಕಾರ್ಯಾಲಯದಲ್ಲಿ ಬೆಳಗ್ಗೆ ೯:೩೦ ಕ್ಕೆ ಮಾಜಿ ಪ್ರದಾನಿ ದಿ. ಇಂದಿರಾ ಗಾಂಧಿಯವರ ೨೯ ನೇ ಪುಣ್ಯ ತಿಥಿ ಅಂಗವಾಗಿ ಮಾತನಾಡಿದ ಅವರು ಶ್ರೀಮತಿ ಇಂದಿರಾಗಾಂಧಿಯವರು ರಾಷ್ಟ್ರ ಹಾಗೂ ಜಗತ್ತು ಕಂಡ ದೀಮಂತ ನಾಯಕಿಯಾಗಿದ್ದರು. ಆಧುನಿಕ ಭಾರತಕ್ಕೆ ಇವರ ಕೊಡುಗೆ ಅಪಾರ, ಬ್ಯಾಂಕುಗಳ ರಾಷ್ಟ್ರೀಕರಣಮಾಡಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ದುರ್ಬಲರಿಗೆ, ಬ್ಯಾಂಕಿನ ಸಾಲದ ಸೌಲಬ್ಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು.    ಉಳ್ಳುವವನೇ ಒಡೆಯ ಎಂಬ ಕಾನೂನನ್ನು ಜಾರಿ ಮಾಡಿ. ಅನೇಕ ಬಡವರಿಗೆ ಭೂಮಿಯನ್ನು ಪಡೆಯುವಂತೆ ಮಾಡಿದರು. ಇವರ ೨೦ ಅಂಶಗಳ ಕಾರ್ಯ ಯೋಜನೆಗಳು ಭಾರತದೇಶವನ್ನು ಅಭಿವೃದ್ಧಿ ಪತದತ್ತ ಕೊಂಡ್ಯೋದು ಇವರ ಗರೀಬಿ ಹಠಾವೋ ಯೋಜನೆಯನ್ನು ಯಶಸ್ವಿಗೊಳಿಸಿ ದೇಶದ ದೀನ, ದಲಿತ, ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು. ಅಮೇರಿಕಾದಂತ ಮುಂದುವರೆದ ರಾಷ್ಟ್ರಗಳಿಗೆ ಭಾರತವನ್ನು ಜಾಗತೀಕ ಮಟ್ಟದಲ್ಲಿ ಪೈಪೋಟಿಗೆ ಸನ್ನದ್ದ ಮಾಡಿದ್ದು ಇಂದಿರಾಗಾಂಧಿಯವರ ಮಹಾನ್ ಕಾರ್ಯವಾಗಿದೆ. ಪಂಜಾಬಿನ ಸುವರ್ಣಮಂದಿರದಲ್ಲಿ ಅಡಗಿದ್ದ ಖಲಿಸ್ತಾನ ಉಗ್ರವಾದಿಗಳನ್ನು ಬಗ್ಗು ಬಡಿದು.  ಉಗ್ರವಾದಿಗಳ ಹುಟ್ಟಡಗಿಸಿ. ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೆ ತ್ಯಾಗಕೊಟ್ಟ ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾಗಾಂಧಿ ಯವರಾಗಿದ್ದರೆಂದು ಇವರ ರಾಷ್ಟಪ್ರೇಮ ಇವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. 
ಇದೇ ಸಂದಭದಲ್ಲಿ ಮಾತನಾಡಿದ ಶಾಂತಣ್ಣ ಮುದಗಲ್, ಎ. ಬಿ ಕಣವಿ, ಇಂದಿರಾ ಭಾವಿಕಟ್ಟಿ, ನಾಗರಾಜ ಬಳ್ಳಾರಿ, ದಿ. ಶ್ರೀಮತಿ ಇಂದಿರಾ ಗಾಂಧಿಯವರ ಅಧಿಕಾರ ಅವಧಿಯ ಕಾರ್ಯವೈಖರಿಯನ್ನು ಶ್ಲಾಘಿಸಿ ದೇಶಕಂಡ ಮಹಾನ್ ನಾಯಕಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್. ಬಿ ನಾಗರಳ್ಳಿ, ಜುಲ್ಲುಖಾದರಿ, ಮರ್ದಾನಲಿ ಅಡ್ಡೆವಾಲಿ, ದ್ಯಾಮಣ್ಣ ಚಿಲವಾಡಗಿ, ಬಾಸುಸಾಬ್ ಕತೀಬ್, ಯಲ್ಲಪ್ಪ ಮೇಟಿ, ಕೃಷ್ಣಾ ಇಟ್ಟಂಗಿ, ಗವಿಸಿದ್ದಪ್ಪ ಮುದಗಲ್, ಶಕುಂತಲಾ ಹುಡೇಜಾಲಿ, ಶಿವಾನಂದ ಹೊದ್ಲೂರಮ, ವೈಜನಾಥ ದೀವಟರ, ಪ್ರಶಾಂತ ರಾಯಕರ್, ಮುನೀರ ಸಿದ್ದಿಕಿ, ಡಿ. ಲಂಕೇಶ ವಕೀಲರು, ಮಕ್ಬುಲ್ ಮನೀಯಾರ, ಈರಣ್ಣ ಬಂಡಾರ, ಕರಮುದ್ದೀನ್ ಕಿಲ್ಲೆದಾರ, ನೂರಜಾ ಬೇಗಂ, ಪರಿವೀನ್ ಬೇಗಂ, ಇನ್ನು ಮುಂತಾದವರು ಉಪಸ್ಥಿತರಿದ್ದರು  ವಕ್ತಾರ ಅಕ್ಬರಪಾಷಾ ಪಲ್ಟನ್ ತಿಳಿಸಿದ್ದಾರೆ,
Please follow and like us:
error