ಸಿರಿ ಸಂಪತ್ತಿಗಿಂತ ವಿದ್ಯಾ ಸಂಪತ್ತು ದೊಡ್ಡದು : ಗವಿಶ್ರೀ

ಕೊಪ್ಪಳ, ಫೆ.೨೧ : ಮನುಷ್ಯ ಜೀವನದಲ್ಲಿ ಗಳಿಸಿದ ಆಸ್ತಿಯಲ್ಲಿ ಪಾಲು ಕೇಳಬಹುದು. ಆದರೆ ಕಲಿತ ವಿದ್ಯೆಯಲ್ಲಿ ಯಾರು ಪಾಲು ಕೇಳದೆ ಇರುವುದು ವಿದ್ಯೆ. ಆದ್ದರಿಂದ ಸಿರಿ ಸಂಪತ್ತಿಗಿಂತ ವಿದ್ಯಾ ಸಂಪತ್ತು ದೊಡ್ಡದು ಎಂದು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರಿಂದು ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ೪ ದಿನಗಳ ಪರೀಕ್ಷಾ ಪೂರ್ವ ತಯಾರಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಪರೀಕ್ಷೆ ಎಂಬುದು ಎಸ್‌ಎಸ್‌ಎಲ್‌ಸಿ ಗೆ ಮಾತ್ರ ಸಿಮೀತವಾದುದಲ್ಲ, ಮನುಷ್ಯನ ಜೀವನದಲ್ಲಿ ತನಗೆ ಗೊತ್ತಿರದೇ ಇರುವ ಅನೇಕ ಸಮಸ್ಯೆಗಳ ಪರೀಕ್ಷೆಗಳು ಹುಟ್ಟಿನಿಂದ ಸಾಯುವವರೆಗೂ ಬರುತ್ತವೆ. ಅವನ್ನು ಮೆಟ್ಟಿನಿಂತು ಎದುರಿಸಬೇಕು. ಅದು ನೀಜವಾದ ಪರೀಕ್ಷೆ. ಜೀವನದ ಪರೀಕ್ಷೆಯಲ್ಲಿ ಪೇಲಾದರೇ ಅದು ನಿಮ್ಮ ಕಡೆಯ ಪರೀಕ್ಷೆ ಎಂದು ಹೇಳಿದರು. ಶಿಕ್ಷಣದ ಮೂಲ ಉದ್ದೇಶ ಒಬ್ಬ ವ್ಯಕ್ತಿಯನ್ನು ಸಮಾಜದ ಆಸ್ತಿಯನ್ನಾಗಿ ಮಾಡುವುದು. ಮನಸ್ಸು ವಿಕಾಸಗೊಳಿಸಿ ಆತ್ಮಸ್ಥೈರ್ಯ ತುಂಬಿಕೊಂಡು ಬೆಳೆಯಲಿಕ್ಕೆ ಶಿಕ್ಷಣ ಅತ್ಯವಶ್ಯ. ಪ್ರತಿಭೆಗಳು ಶ್ರೀಮಂತರ ಮನೆಯಲ್ಲಿ ಅರಳುವುದಿಲ್ಲ. ಅದು ಬಡವರ ಗುಡುಸಲಿನಲ್ಲಿ ಅರಳುತ್ತದೆ. ಮನುಷ್ಯನಲ್ಲಿ ಕೀಳಿರುಮೆ, ಜಾತಿ ಎಂಬುದು ಬರಬಾರದು. ಸಮಾಜದಲ್ಲಿ ಸಮಾನ ಮನಸ್ಕರನಾಗಿ ಬಾಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಓದಿ ದೊಡ್ಡವನಾಗುತ್ತೇನೆ ಎಂಬ ಛಲ ಇರಬೇಕು. ತಂದೆ-ತಾಯಿಗಳು ತಮ್ಮ ಮಕ್ಕಳ ಬಗ್ಗೆ ನೂರಾರು ಕನಸ್ಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅವರ ಋಣ ತೀರಿಸಲಿಕ್ಕಾಗಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಆತ್ಮಸ್ಥೈರ್ಯದಿಂದ ಓದಿ ಉತ್ತಮ ಪಲಿತಾಂಶ ತರುವ ಮೂಲಕ ಅವರ ಆಸೆ ಈಡೇರಿಸುವ ಮೂಲಕ ಕೀರ್ತಿವಂತರಾಗಬೇಕೆಂದು ಹೇಳಿದ ಅವರು ದೇವರು ಕೊಟ್ಟ ಸಂಪತ್ತನ್ನು ಯಾರು ಸರಿಯಾಗಿ ಬಳಸಿಕೊಳ್ಳುತ್ತಾರೆ ಅವರೇ ದೊಡ್ಡವರು ಎಂದು ಹೇಳಿದರು. 
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಶ್ರೀಮತಿ ಶುಭಾ, ತಾಲೂಕಾಧಿಕಾರಿಗಳಾದ ಚಿದಾನಂದಪ್ಪ, ರವಿರಾಜ ಎಂ. ಇದ್ದಲಗಿ, ಟಿ.ಎಂ. ಜಯಪ್ರಕಾಶ, ಆರ್.ಕೆ. ರಾವ್ ಬೆಂಗಳೂರು, ರಾಘವೇಂದ್ರ ಪಾನಂಘಂಟಿ,, ರಾಮರಡ್ಡೇಪ್ಪ ರಡ್ಡೇರ್ ಮತ್ತು ಇಲಾಖೆ ಅಧಿಕಾರಿಗಳು, ತರಬೇತಿ ಶಿಕ್ಷಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Please follow and like us:
error